ಎಚ್ ಡಿ ಎಫ್ ಸಿ ಉದ್ಯೋಗಗಳು

Video Image

ಎಚ್ ಡಿ ಎಫ್ ಸಿಯಲ್ಲಿ ಉದ್ಯೋಗಿಗಳೇ ಪ್ರಮುಖರಾಗಿರುತ್ತಾರೆ. ಅವರಿಗೆ ಒಳ್ಳೆಯ ಪರಿಸರವನ್ನು ಒದಗಿಸಿಕೊಟ್ಟು ಸಾಕಷ್ಟು ತರಬೇತಿ ನೀಡಿ ಅವರ ವೃತ್ತಿಯಲ್ಲಿ ಏಳಿಗೆ ತರಲು ಸತತವಾಗಿ ಗಮನವಿಡುವುದೇ ನಮ್ಮ ಕರ್ತವ್ಯವಾಗಿದೆ. ತುಂಬಾ ಹೆಮ್ಮೆಯಿಂದ ಹೇಳುವುದೇನೆಂದರೆ, ಎಚ್ ಡಿ ಎಫ್ ಸಿಯಲ್ಲಿ ತುಂಬಾ ಉತ್ಸಾಹಿ ಉದ್ಯೋಗಿಗಳಿದ್ದಾರೆ, ಅಲ್ಲದೇ ನಮ್ಮಲ್ಲಿ ಕಡಿಮೆ ಉದ್ಯೋಗ ತೊರೆಯುವ ದರವಿದೆ.

ನೀವು ಯುವ ಪ್ರತಿಭಾನ್ವಿತ ವ್ಯಕ್ತಿಯಾಗಿದ್ದು, ಸವಾಲುಗಳನ್ನು ಎದುರಿಸುವ ಮನೋಧರ್ಮವಿದ್ದರೆ ಮತ್ತು ಏಳಿಗೆ ಹೊಂದುವ ತವಕ ಮತ್ತು ನಮ್ಮ ಸಂಸ್ಥೆಯ ಪರಿಸರದಲ್ಲಿ ಹೊಂದಿಕೊಳ್ಳುವ ಸಾಮರ್ಥ್ಯವಿದ್ದಲ್ಲಿ ನೀವು ಎಚ್ ಡಿ ಎಫ್ ಸಿಯ ಬೆಳವಣಿಗೆ ಪಯಣದಲ್ಲಿ ಜತೆಯಾಗಬಹುದು.

ಎಚ್ ಡಿ ಎಫ್ ಸಿ ಏಕೆ ಬೇಕು?

ದೇಶದಲ್ಲಿ ಪ್ರೀಮಿಯರ್ ಹೌಸಿಂಗ್ ಫೈನಾನ್ಸ್ ಇನ್ಸ್ಟಿಟ್ಯೂಷನ್

ಕಳೆದ 41 ವರ್ಷಗಳಲ್ಲಿ ಸ್ಥಿರವಾದ ಹೆಚ್ಚಿನ ಬೆಳವಣಿಗೆ ದರವು ಯುವ ವೃತ್ತಿಪರರಿಗೆ ಕಂಪನಿಯೊಂದಿಗೆ ಬೆಳೆಯಲು ಸಾಕಷ್ಟು ಕಲಿಕಾ ಅವಕಾಶಗಳನ್ನು ಒದಗಿಸಿದೆ

ಮುಕ್ತ ಮತ್ತು ಅನೌಪಚಾರಿಕ ಸಂಸ್ಕೃತಿ ನಾವು ಗ್ರಾಹಕರ ಸೇವೆಯಲ್ಲಿ ಸಮಗ್ರತೆ, ಬದ್ಧತೆ, ಸಹಭಾಗಿತ್ವ ಮತ್ತು ಶ್ರೇಷ್ಠತೆಯನ್ನು ಗೌರವಿಸುತ್ತೇವೆ.

'ನೋಡಿ ತಿಳಿ ಮಾಡಿ ಕಲಿ' ಎಂಬ ಗಾದೆ ಮಾತಿನಂತೆ, ತೀರ್ಮಾನಿಸುವಿಕೆ ಮತ್ತು ಕೌಶಲ್ಯ ಕಲಿಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ನಮ್ಮ ಉದ್ಯೋಗಿಗಳ 'ದೀರ್ಘಾವಧಿ ಸಂಪತ್ತು' ಕಡೆಗೂ ನಮ್ಮ ಗಮನ ಇರುತ್ತದೆ.

ಪ್ರಸ್ತುತ ಹುದ್ದೆಗಳು

ಪ್ರಸ್ತುತ ಹುದ್ದೆಗಳು

14 ಫಲಿತಾಂಶಗಳು
ಕೊಟ್ಟಾಯಂ
ತಾಂತ್ರಿಕ ಅಪ್ರೈಸರ್- ಕೊಟ್ಟಾಯಂ/ಮುವಟ್ಟುಪುಳ
ಅಗತ್ಯವಿರುವ ಅನುಭವ: 2+ ವರ್ಷಗಳ ಅನುಭವವು ಹೆಚ್ಚುವರಿ ಪ್ರಯೋಜನವಾಗಿರುತ್ತದೆ
ಶಿಕ್ಷಣ: B Tech /BE (ಸಿವಿಲ್ ಎಂಜಿನಿಯರಿಂಗ್)

ಕೆಲಸದ ವಿವರ

ತಾಂತ್ರಿಕ

1 ಮೌಲ್ಯಮಾಪನ - ಲೋನಿಗೆ ಭದ್ರತೆಯಾಗಿ ನೀಡಲಾಗುವ ಆಸ್ತಿಗಳ ಮಾರುಕಟ್ಟೆ ಮೌಲ್ಯವನ್ನು ಮೌಲ್ಯಮಾಪನ ಮಾಡುವುದು - ಭೂಮಿ ಮತ್ತು ಕಟ್ಟಡ.
2 ಸೈಟ್ ಭೇಟಿಗಳು - ಮೌಲ್ಯ ಮತ್ತು ಕೆಲಸದ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಪ್ರಾಪರ್ಟಿಗಳಿಗೆ ಭೇಟಿ ಮಾಡುವುದು.
3 ಡಾಕ್ಯುಮೆಂಟೇಶನ್ - ಅನ್ವಯವಾಗುವ ಕಟ್ಟಡ ನಿಯಮಗಳು ಮತ್ತು ಇತರ ಅನ್ವಯವಾಗುವ ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಕಟ್ಟಡ ಅನುಮೋದನೆಗಳು, ಯೋಜನೆಗಳು, ಅಂದಾಜುಗಳು ಮುಂತಾದ ಡಾಕ್ಯುಮೆಂಟ್‌ಗಳ ಪರಿಶೀಲನೆ.
4 ಡಾಕ್ಯುಮೆಂಟ್‌ಗಳು ಮತ್ತು ಸೈಟ್ ವೀಕ್ಷಣೆ ಆಧಾರದ ಮೇಲೆ ಮಾಡಲಾದ ಮೌಲ್ಯಮಾಪನದ ಆಧಾರದ ಮೇಲೆ ಸೈಟ್ ನಿರ್ವಹಣೆಗಳ ರೆಕಾರ್ಡಿಂಗ್ ಮತ್ತು ಲೋನ್ ಮೊತ್ತವನ್ನು ಶಿಫಾರಸು ಮಾಡುವುದು.
5 ರಿಲೇಶನ್‌ಶಿಪ್ ಮ್ಯಾನೇಜ್ಮೆಂಟ್ - ಚಾನಲ್ ಪಾಲುದಾರರೊಂದಿಗೆ ಗ್ರಾಹಕರೊಂದಿಗೆ.
6 ಅರ್ಹತೆಗಳು - ಉತ್ತಮ ಮತ್ತು ಸ್ಥಿರವಾದ ಶೈಕ್ಷಣಿಕ ದಾಖಲೆ (ಕನಿಷ್ಠ 60% ಅಂಕಗಳು) ಮತ್ತು ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರುವ ಹೊಸ/ಅನುಭವಿ B Tech /BE (ಸಿವಿಲ್ ಎಂಜಿನಿಯರಿಂಗ್).
7 ಲೊಕೇಶನ್ – ಕೊಟ್ಟಾಯಂ/ಮುವಟ್ಟುಪುಳ

ಅಪೇಕ್ಷಿತ ಅಭ್ಯರ್ಥಿ ಪ್ರೊಫೈಲ್

ಕೊಚ್ಚಿ
ಕಾರ್ಯಾಚರಣೆಗಳು (ಕ್ರೆಡಿಟ್ ಪ್ರಕ್ರಿಯೆ)
ಅಗತ್ಯವಿರುವ ಅನುಭವ: 2+ ವರ್ಷಗಳ ಅನುಭವವು ಹೆಚ್ಚುವರಿ ಪ್ರಯೋಜನವಾಗಿರುತ್ತದೆ
ಶಿಕ್ಷಣ: ಪದವೀಧರರು, M Com, CA ಅಥವಾ MBA

ಕೆಲಸದ ವಿವರ

ಕಾರ್ಯಾಚರಣೆಗಳು (ಕ್ರೆಡಿಟ್ ಪ್ರಕ್ರಿಯೆ)

1 ಮೌಲ್ಯಮಾಪನ - ಪರಿಣಾಮಕಾರಿ ಕ್ರೆಡಿಟ್ ಮೌಲ್ಯಮಾಪನದ ಮೂಲಕ ಅಪಾಯದ ನಿರ್ವಹಣೆ, TAT ನಿರ್ವಹಿಸುವುದು, ಚಾನಲ್ ಪಾಲುದಾರರೊಂದಿಗೆ ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳುವುದು ಮತ್ತು ಪ್ರಕ್ರಿಯೆಯ ಚಿಂತಕ ಮತ್ತು ನಾವೀನ್ಯಕಾರರಾಗುವ ಮೂಲಕ ಗುಣಮಟ್ಟದ ಪೋರ್ಟ್‌‌ಪೋಲಿಯೋ ರಚನೆಗಾಗಿ.
2 ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸುವುದು ಮತ್ತು ಪರಿಶೀಲಿಸುವುದು (ಉದಾ. ಕ್ರೆಡಿಟ್, ಲೋನ್ ಒಪ್ಪಂದಗಳು, ಅಪ್ಲಿಕೇಶನ್ ಫಾರ್ಮ್, ಗ್ಯಾರಂಟಿ ಫಾರ್ಮ್‌‌ಗಳು) (ಕಾನೂನು ಪರಿಣಾಮಗಳು).
3 ಫೋನಿನಲ್ಲಿ ಗ್ರಾಹಕರೊಂದಿಗೆ ಸಂವಹನ. ಇದು ಗ್ರಾಹಕರ ಆಕ್ಷೇಪಗಳನ್ನು ನಿರ್ವಹಿಸುವುದು ಕೂಡ ಒಳಗೊಂಡಿದೆ. ಗ್ರಾಹಕರನ್ನು ಭೇಟಿ ಮಾಡುವುದು ಮತ್ತು ವೈಯಕ್ತಿಕ ಚರ್ಚೆ ಮಾಡುವುದು. ಗ್ರಾಹಕರ ಅಗತ್ಯಗಳಿಗೆ ಸೂಕ್ತ ಪರಿಹಾರಗಳನ್ನು ಸೂಚಿಸುವುದು.
4 ಸಮಾಲೋಚನೆ ಕೌಶಲ್ಯಗಳು - ಗ್ರಾಹಕರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು, ಆಕ್ಷೇಪಗಳನ್ನು ನಿರ್ವಹಿಸುವುದು ಮತ್ತು ಪರಿಹಾರಗಳ ರಚನೆ, ಮುಚ್ಚುವುದು.
ಅರ್ಹತೆಗಳು - ಹೊಸ/ಅನುಭವಿ B Com ಪದವೀಧರರು, M Com, CA ಅಥವಾ MBA ಉತ್ತಮ ಮತ್ತು ಸ್ಥಿರ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದು (ಕನಿಷ್ಠ 60% ಅಂಕಗಳು) ಮತ್ತು ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ ಉತ್ತಮ ಸಂವಹನ ಕೌಶಲ್ಯಗಳು.

ಲೊಕೇಶನ್ - ಕೊಚ್ಚಿ

ಅಪೇಕ್ಷಿತ ಅಭ್ಯರ್ಥಿ ಪ್ರೊಫೈಲ್

ಕಣ್ಣೂರು
ಬಿಸಿನೆಸ್ ಡೆವಲಪ್ಮೆಂಟ್ - ಕ್ಯಾಲಿಕಟ್/ಕಣ್ಣೂರು
ಅಗತ್ಯವಿರುವ ಅನುಭವ: 2+ ವರ್ಷಗಳ ಅನುಭವವು ಹೆಚ್ಚುವರಿ ಪ್ರಯೋಜನವಾಗಿರುತ್ತದೆ
ಶಿಕ್ಷಣ: ಪದವೀಧರರು/ಪೋಸ್ಟ್ ಗ್ರಾಜುಯೇಟ್‌ಗಳು ಅಥವಾ MBA

ಕೆಲಸದ ವಿವರ

ವ್ಯಾಪಾರ ಅಭಿವೃದ್ಧಿ

1 ಡೆವಲಪರ್‌ಗಳು, ಅಭಿವೃದ್ಧಿ ಪ್ರಾಧಿಕಾರಗಳು, ಕಾರ್ಪೊರೇಟ್‌ಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ನಿರ್ವಹಿಸುವುದು.
2 ಮೇಲಿನ ಘಟಕಗಳೊಂದಿಗೆ ಟೈ-ಅಪ್‌ಗಳು ಮತ್ತು ಕಾರ್ಯಕ್ರಮಗಳ ಮೂಲಕ ಪ್ರಾಡಕ್ಟ್‌‌ಗಳನ್ನು ಉತ್ತೇಜಿಸುವುದು.
3 ಮಾರುಕಟ್ಟೆಗಳ ವಿಶ್ಲೇಷಣೆ, ವ್ಯಾಪಾರ ತಂತ್ರಗಳ ಶಿಫಾರಸು.
4 ಬಿಸಿನೆಸ್ ಸೋರ್ಸ್ ಮ್ಯಾಪಿಂಗ್ ಮೂಲಕ ಮಾರಾಟ ಸೇಲ್ಸ್ ಫೋರ್ಸ್ ಬೆಂಬಲ.
5 ತರಬೇತಿ ಮತ್ತು ಸ್ಪರ್ಧೆಗಳ ಮೂಲಕ ಮಾರಾಟ ಪಡೆಯಲು ಪ್ರೇರಣೆ.
6 ಕಾಲ್ ಸೆಂಟರ್ ಮತ್ತು ವೆಬ್ ಆಧಾರಿತ ಚಟುವಟಿಕೆಗಳ ಸಂಯೋಜನೆ.
7 ಅರ್ಹತೆಗಳು - ಹೊಸ/ಅನುಭವಿ ಪದವೀಧರರು/ಪೋಸ್ಟ್ ಗ್ರಾಜುಯೇಟ್‌ಗಳು ಅಥವಾ MBA ಉತ್ತಮ ಮತ್ತು ಸ್ಥಿರವಾದ ಶೈಕ್ಷಣಿಕ ದಾಖಲೆ (ಕನಿಷ್ಠ 60% ಅಂಕಗಳು) ಮತ್ತು ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ ಉತ್ತಮ ಸಂವಹನ ಕೌಶಲ ಹೊಂದಿರಬೇಕು.
8 ಲೊಕೇಶನ್ – ಕ್ಯಾಲಿಕಟ್/ಕಣ್ಣೂರು.

ಅಪೇಕ್ಷಿತ ಅಭ್ಯರ್ಥಿ ಪ್ರೊಫೈಲ್

ತಿರುಚ್ಚೂರ್
ಕಾರ್ಯಾಚರಣೆ (ಫ್ರಂಟ್ ಆಫೀಸ್) - ತ್ರಿಚೂರ್/ಕ್ಯಾಲಿಕಟ್
ಅಗತ್ಯವಿರುವ ಅನುಭವ: 2+ ವರ್ಷಗಳ ಅನುಭವವು ಹೆಚ್ಚುವರಿ ಪ್ರಯೋಜನವಾಗಿರುತ್ತದೆ
ಶಿಕ್ಷಣ: ಪದವೀಧರರು/ಪೋಸ್ಟ್ ಗ್ರಾಜುಯೇಟ್‌ಗಳು ಅಥವಾ MBA

ಕೆಲಸದ ವಿವರ

ಕಾರ್ಯಾಚರಣೆಗಳು (ಫ್ರಂಟ್ ಆಫೀಸ್)
1 ಮೌಲ್ಯಮಾಪನ - ಭವಿಷ್ಯದಲ್ಲಿ ಲೋನನ್ನು ಮರುಪಾವತಿಸಲು ಕ್ರೆಡಿಟ್ ಅರ್ಹತೆ ಮತ್ತು ಗ್ರಾಹಕರ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವುದು.
2 ಸಂವಹನ ಮತ್ತು ಲೋನ್ ಸಮಾಲೋಚನೆ - ಗ್ರಾಹಕರೊಂದಿಗೆ ಸಭೆ ಮತ್ತು ಸಂವಹನ.
3 ಡಾಕ್ಯುಮೆಂಟೇಶನ್ - ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸುವುದು ಮತ್ತು ಪರಿಶೀಲಿಸುವುದು.
4 ಲೋನ್ ಪ್ರಕ್ರಿಯೆ/ ವಿತರಣೆ ಪ್ರಕ್ರಿಯೆ.
5 ಕ್ರಾಸ್-ಸೆಲ್ಲಿಂಗ್ - ಗ್ರೂಪ್ ಕಂಪನಿ ಪ್ರಾಡಕ್ಟ್‌ಗಳ ಕ್ರಾಸ್-ಸೆಲ್ಲಿಂಗ್.
6 ರಿಲೇಶನ್‌ಶಿಪ್ ಮ್ಯಾನೇಜ್ಮೆಂಟ್ - ಚಾನಲ್ ಪಾಲುದಾರರೊಂದಿಗೆ ಗ್ರಾಹಕರೊಂದಿಗೆ.
ಅರ್ಹತೆಗಳು - ಹೊಸ/ಅನುಭವಿ ಪದವೀಧರರು/ಪೋಸ್ಟ್ ಗ್ರಾಜುಯೇಟ್‌ಗಳು ಅಥವಾ MBA ಉತ್ತಮ ಮತ್ತು ಸ್ಥಿರವಾದ ಶೈಕ್ಷಣಿಕ ದಾಖಲೆ (ಕನಿಷ್ಠ 60% ಅಂಕಗಳು) ಮತ್ತು ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು.
ಲೊಕೇಶನ್ - ತ್ರಿಚೂರ್/ಕ್ಯಾಲಿಕಟ್ 

ಅಪೇಕ್ಷಿತ ಅಭ್ಯರ್ಥಿ ಪ್ರೊಫೈಲ್

ಮಾರ್ತಾಂಡಮ್
ಟೆಕ್ನಿಕಲ್ ಅಪ್ರೈಸರ್ - ಮಾರ್ತಾಂಡಂ, ತಮಿಳುನಾಡು
ಅಗತ್ಯವಿರುವ ಅನುಭವ: 2+ ವರ್ಷಗಳ ಅನುಭವವು ಹೆಚ್ಚುವರಿ ಪ್ರಯೋಜನವಾಗಿರುತ್ತದೆ
ಶಿಕ್ಷಣ: ಬಿ.ಟೆಕ್/ಎಂ. ಟೆಕ್- ಸಿವಿಲ್

ಕೆಲಸದ ವಿವರ

ಉದ್ಯೋಗದ ಜವಾಬ್ದಾರಿಗಳು

 ತಾಂತ್ರಿಕ ಮೌಲ್ಯಮಾಪನ/ಆಸ್ತಿಗಳ ಅಂದಾಜು.
 ಆಸ್ತಿ ಮೌಲ್ಯಮಾಪನ ಮಾಡಲು ಬೇಕಾದ ವಿವಿಧ ತಾಂತ್ರಿಕ/ಆದಾಯ ಡಾಕ್ಯುಮೆಂಟ್‌ಗಳ ಪರಿಶೀಲನೆಗಳು.
 ಗ್ರಾಹಕರನ್ನು ಭೇಟಿ ಮಾಡುವುದು ಮತ್ತು ವೈಯಕ್ತಿಕವಾಗಿ ಮಾತುಕತೆ ನಡೆಸುವುದು
 ವ್ಯಾಪಕವಾಗಿ ಪ್ರಯಾಣ ಮಾಡಲು ಸಿದ್ಧರಾಗಿರಬೇಕು
 ಉತ್ತಮ ಸಂವಹನ ಕೌಶಲಗಳು, ಇಂಗ್ಲೀಷ್ ಮತ್ತು ಮಲಯಾಳಂನಲ್ಲಿ ಮಂಡನೆ ಮಾಡುವ ಕೌಶಲಗಳು
 ಬಿಸಿನೆಸ್ ಸೋರ್ಸ್ ಮ್ಯಾಪಿಂಗ್ ಮತ್ತು ಸೋರ್ಸ್ ಪ್ರಕಾರ ಕಾರ್ಯಕ್ಷಮತೆಯ ಮಾಪನದ ಮೂಲಕ ಸೇಲ್ಸ್ ಫೋರ್ಸಿಗೆ ಬೆಂಬಲ.
 ವೈಯಕ್ತಿಕ ಕಾರ್ಯಕ್ಷಮತೆಯ ಮೇಲೆ ಮಾತ್ರ ಗಮನಹರಿಸದೆ ತಂಡವಾಗಿ ಕೆಲಸ ಮಾಡುವುದು ಮತ್ತು ತಂಡವಾಗಿ ಕೊಡುಗೆ ನೀಡುವುದು.
 ಆಕ್ರಮಣಶೀಲತೆ/ಅನುಸರಿಸಿಕೊಳ್ಳುವುದು /ಹೊಂದಾಣಿಕೆ/ಸ್ಪರ್ಧಾತ್ಮಕ ಭಾವನೆ ಇತ್ಯಾದಿ ನಿಯಮಗಳು

ಲೊಕೇಶನ್: ಮಾರ್ತಂಡಮ್, ತಮಿಳುನಾಡು
ಅರ್ಹತೆ: ಬಿ.ಟೆಕ್/ಎಂ. ಟೆಕ್- ಸಿವಿಲ್
ಟಿಪ್ಪಣಿ: 2+ ವರ್ಷಗಳ ಅನುಭವವು ಹೆಚ್ಚುವರಿ ಪ್ರಯೋಜನವಾಗಿರುತ್ತದೆ.

ಅಪೇಕ್ಷಿತ ಅಭ್ಯರ್ಥಿ ಪ್ರೊಫೈಲ್

ಮುಂಬೈ
ಮ್ಯಾನೇಜರ್ ಆಡಿಟ್ ಮತ್ತು ರೆಗ್ಯುಲೇಟರಿ ಕಾಂಪ್ಲಯನ್ಸ್ - ಕ್ರೆಡಿಟ್ ರಿಸ್ಕ್
ಅಗತ್ಯವಿರುವ ಅನುಭವ: 10 ರಿಂದ 15 ವರ್ಷಗಳು
ಶಿಕ್ಷಣ: ಚಾರ್ಟರ್ಡ್ ಅಕೌಂಟೆಂಟ್

ಕೆಲಸದ ವಿವರ

ಮ್ಯಾನೇಜರ್ ಆಡಿಟ್ ಮತ್ತು ರೆಗ್ಯುಲೇಟರಿ ಕಾಂಪ್ಲಯನ್ಸ್‌‌ಗಾಗಿ ಪ್ರೊಫೈಲ್ - ಕ್ರೆಡಿಟ್ ರಿಸ್ಕ್

ಅರ್ಹತೆಗಳು: ಚಾರ್ಟರ್ಡ್ ಅಕೌಂಟೆಂಟ್  

ಕೆಲಸದ ಅನುಭವ: 10 ರಿಂದ 15 ವರ್ಷಗಳ ಅನುಭವ ಯಾವುದೇ ಹಣಕಾಸು ಸಂಸ್ಥೆ/ಬ್ಯಾಂಕ್ ನಿರ್ವಹಣೆ ECL ಸಂಬಂಧಿತ ವಿಷಯಗಳ ಕ್ರೆಡಿಟ್ ರಿಸ್ಕ್ ಕಾರ್ಯಕ್ರಮದಲ್ಲಿ IFRS 9 ಅಡಿಯಲ್ಲಿ, NHB/RBI ಗೆ ನಿಯಂತ್ರಕ ವರದಿ ಮಾಡುವುದು ಮತ್ತು ಶಾಸನಬದ್ಧ ಆಡಿಟರ್‌ಗಳು / ನಿಯಂತ್ರಕಗಳನ್ನು ನಿರ್ವಹಿಸುವುದು.

ಕೆಲಸದ ವಿವರ:

  • ಭಾರತೀಯ ಅಕೌಂಟಿಂಗ್ ಮಾನದಂಡಗಳ (IndAS) ಅಡಿಯಲ್ಲಿ ಸಂಗ್ರಹಣೆ, ಲೋನ್ ನಷ್ಟ ಮತ್ತು ನಷ್ಟ ನೀಡಲಾದ ಡೀಫಾಲ್ಟ್‌ಗಳನ್ನು ಅಂದಾಜು ಮಾಡಲು ಮಾದರಿಗಳು ಮತ್ತು ಸಾಧನಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುವುದು
  • NPA/ ನಿಬಂಧನೆ ಮತ್ತು ನಿಯಂತ್ರಕ ವರದಿಯ ಕಂಪ್ಯುಟೇಶನ್‌‌ನಲ್ಲಿ ಕಾರ್ಯಯೋಜನೆಗಳನ್ನು ನಿರ್ವಹಿಸುವುದು.
  • RBI/NHB ಸರ್ಕ್ಯುಲರ್‌ಗಳ ವ್ಯಾಖ್ಯಾನ ಮತ್ತು ರೆಗ್ಯುಲೇಟರಿ ರಿಪೋರ್ಟ್‌‌ಗಳಲ್ಲಿ ಕಾರ್ಯನಿರ್ವಹಿಸುವುದು.
  • ಭಾರತೀಯ ಅಕೌಂಟಿಂಗ್ ಮಾನದಂಡ 109 ಪ್ರಕಾರ ನಿರೀಕ್ಷಿತ ಕ್ರೆಡಿಟ್ ನಷ್ಟದ ಲೆಕ್ಕಾಚಾರಕ್ಕಾಗಿ ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸಿಸ್ಟಮ್ ಆಟೋಮೇಶನ್‌ಗಾಗಿ IT ತಂಡದೊಂದಿಗೆ ಸಹಕರಿಸುವುದು
  • ವಿವಿಧ ಆಂತರಿಕ ನಿಯಂತ್ರಣಗಳು ಮತ್ತು ಟೆಸ್ಟಿಂಗ್ ಆಡಿಟ್‌ಗಾಗಿ ಆಂತರಿಕ ಇಲಾಖೆಗಳು ಮತ್ತು ಆಂತರಿಕ ಆಡಿಟರ್ಸ್ ಒಳಗೆ ಸಹಕಾರ ನೀಡುವುದು.

ಲೊಕೇಶನ್: ಮುಂಬೈ

ಅಪೇಕ್ಷಿತ ಅಭ್ಯರ್ಥಿ ಪ್ರೊಫೈಲ್

ಪುಣೆ
ಕ್ರೆಡಿಟ್ ಅಪ್ರೈಸರ್-CA-ರಿಟೇಲ್ ಲೆಂಡಿಂಗ್, ಪುಣೆ
ಅಗತ್ಯವಿರುವ ಅನುಭವ: 1-5
ಶಿಕ್ಷಣ: CA

ಕೆಲಸದ ವಿವರ

- ಸ್ವಯಂ ಉದ್ಯೋಗಿ / ಸಂಬಳದ ಗ್ರಾಹಕರ ಲೋನಿನ ಯೋಗ್ಯತೆಯನ್ನು ಅಂದಾಜು ಮಾಡುವುದು.
- ಲೋನ್ ಅಪ್ರೈಸಲ್ ಮತ್ತು ಲೋನ್ ಸೇವೆ ಅಗತ್ಯಗಳ ಕುರಿತಂತೆ ಗ್ರಾಹಕರೊಂದಿಗೆ ಒಡನಾಟ.
ಗ್ರಾಹಕರನ್ನು ಭೇಟಿಯಾಗುವುದು ಮತ್ತು ವೈಯಕ್ತಿಕ ಚರ್ಚೆ ಮಾಡುವುದು. ಗ್ರಾಹಕರ ಅವಶ್ಯಕತೆಗಳಿಗೆ ಸೂಕ್ತ ಪರಿಹಾರಗಳನ್ನು ಸೂಚಿಸುವುದು

- ವ್ಯಾಪಾರ ಭೇಟಿ ಮತ್ತು ಪರಿಶೀಲನೆ.
- ದಾಖಲೆಗಳ ಸಂಗ್ರಹ ಮತ್ತು ಪರಿಶೀಲನೆ.
- ಅನುಮೋದನೆಗೆ ಪ್ರಸ್ತಾಪವನ್ನು ಶಿಫಾರಸ್ಸು ಮಾಡುವುದು.
- ಹೊಸ ಮತ್ತು ಹೆಚ್ಚಳದ ವ್ಯವಹಾರಗಳನ್ನು ಪಡೆಯಲು ಯೋಜನೆ ಮತ್ತು ಮಾರ್ಗಗಳ ಕಾರ್ಯಗತಗೊಳಿಸುವಿಕೆ.

ಅಪೇಕ್ಷಿತ ಅಭ್ಯರ್ಥಿ ಪ್ರೊಫೈಲ್

ಮೇಲಿನ ಹುದ್ದೆಗೆ ಹೆಚ್ಚಿನ ಹುರುಪಿನ ಮಟ್ಟ, ಸಮಗ್ರತೆ, ಗ್ರಾಹಕರ ದೃಷ್ಟಿಕೋನ, ಉತ್ತಮ ಸಂವಹನ ಕೌಶಲ್ಯಗಳು (ಮೌಖಿಕ ಮತ್ತು ಲಿಖಿತ), ಮನವೊಲಿಸುವ ಕೌಶಲ್ಯಗಳು, ಪ್ರಕ್ರಿಯೆ ದೃಷ್ಟಿಕೋನ, ಸಮಯ ನಿರ್ವಹಣೆ, ತಂಡದ ಕೆಲಸ ಕೌಶಲ್ಯಗಳು ಮತ್ತು ಸಾಧಿಸುವ ಛಲ ಬೇಕಾಗುತ್ತವೆ.

ಪಟ್ನಾ
ಕ್ರೆಡಿಟ್ ಅಪ್ರೈಸಲ್-ರಿಟೇಲ್ ಲೆಂಡಿಂಗ್-ಪಾಟ್ನಾ
ಅಗತ್ಯವಿರುವ ಅನುಭವ: 7-8
ಶಿಕ್ಷಣ: CA

ಕೆಲಸದ ವಿವರ

ಉದ್ಯೋಗಿ ಗ್ರಾಹಕರ ಲೋನ್ ಯೋಗ್ಯತೆಯನ್ನು ಲೆಕ್ಕ ಹಾಕುವುದು
ಗ್ರಾಹಕರೊಂದಿಗೆ ಲೋನ್ ಪರಿಶೀಲನೆ ಮತ್ತು ಲೋನ್ ಸೇವಾ ಅಗತ್ಯತೆಯ ಕುರಿತು ಫೋನ್ ಮೂಲಕ ಸಮಾಲೋಚಿಸುವುದು
ಕ್ರೆಡಿಟ್ ಡಾಕ್ಯುಮೆಂಟ್‌ಗಳ ಪರಿಶೀಲನೆ ಮತ್ತು ಸೀಳುನೋಟ
ಲೋನಿನ ಅನುಮೋದನೆಗೆ ಶಿಫಾರಸು ಮಾಡುವುದು
ಚಾನಲ್ ಪಾಲುದಾರರೊಂದಿಗೆ ಸಹಕರಿಸುವುದು
ಡಿಪಾರ್ಟ್‌ಮೆಂಟ್‌ಗಳ ನಡುವೆ ಸಹಕಾರ.

ಅಪೇಕ್ಷಿತ ಅಭ್ಯರ್ಥಿ ಪ್ರೊಫೈಲ್

ಮೇಲಿನ ಹುದ್ದೆಗೆ ಹೆಚ್ಚಿನ ಹುರುಪಿನ ಮಟ್ಟ, ಸಮಗ್ರತೆ, ಗ್ರಾಹಕರ ದೃಷ್ಟಿಕೋನ, ಉತ್ತಮ ಸಂವಹನ ಕೌಶಲ್ಯಗಳು (ಮೌಖಿಕ ಮತ್ತು ಲಿಖಿತ), ಮನವೊಲಿಸುವ ಕೌಶಲ್ಯಗಳು, ಪ್ರಕ್ರಿಯೆ ದೃಷ್ಟಿಕೋನ, ಸಮಯ ನಿರ್ವಹಣೆ, ತಂಡದ ಕೆಲಸ ಕೌಶಲ್ಯಗಳು ಮತ್ತು ಸಾಧಿಸುವ ಛಲ ಬೇಕಾಗುತ್ತವೆ.

ದೆಹಲಿ
ಲೀಗಲ್ ಅಪ್ರೈಸರ್- ದೆಹಲಿ
ಅಗತ್ಯವಿರುವ ಅನುಭವ: 2-4
ಶಿಕ್ಷಣ: LL.B

ಕೆಲಸದ ವಿವರ

ಉದ್ಯೋಗದ ವಿವರಣೆ - - ಪ್ರಾಜೆಕ್ಟ್ ಫೈಲ್‌ಗಳ ಅಪ್ರೈಸಲ್ (ಆಸ್ತಿ ಕಾನೂನುಗಳ ಬಗ್ಗೆ ಹೆಚ್ಚಿನ ಜ್ಞಾನದೊಂದಿಗೆ), ವೈಯಕ್ತಿಕ ಲೋನ್‌ಗಳಿಗೆ ಸಂಬಂಧಿಸಿದ ಹಕ್ಕು ದಾಖಲೆಗಳ ಅಪ್ರೈಸಲ್. - ಆಸ್ತಿ, ಸುರಕ್ಷತೆ ಸೃಷ್ಟಿ ಮತ್ತು ಶೀರ್ಷಿಕೆ ಪರಿಶೀಲನೆಗೆ ಸಂಬಂಧಿಸಿದಂತೆ ಚಿಲ್ಲರೆ ಲೋನ್ ಸಮಸ್ಯೆಗಳ ಕುರಿತು ಕಾನೂನು ಸಲಹೆ ನೀಡುವುದು. - ಅನುಸರಣೆ ಸಮಸ್ಯೆಗಳನ್ನು ನಿರ್ವಹಿಸುವುದು. ಬಿಲ್ಡರ್‌ಗಳು ಹೊಂದಿರುವ ವಿವಿಧ ಸಾಲ ವ್ಯವಸ್ಥೆಗಳ ಕರಡು ಮತ್ತು ರಚನೆ. - ಚಿಲ್ಲರೆ ಲೋನ್ ಒಪ್ಪಂದಗಳ ಕರಡು ಮತ್ತು ಕಾನೂನು ನೋಟಿಸ್‌ಗಳಿಗೆ ಉತ್ತರಿಸುವುದು. ಕೆಲಸದ ಪ್ರೊಫೈಲ್ ಇವುಗಳನ್ನೂ ಒಳಗೊಂಡಿದೆ - ಅಡಮಾನದ ಅಡಿಯ ಆಸ್ತಿಗೆ ಸಂಬಂಧಿಸಿದ ಕಾನೂನು ದಾಖಲೆಗಳ ಪ್ರಮಾಣೀಕರಣ, ಮೂರನೇ ವ್ಯಕ್ತಿಯ ವಕೀಲರು ನೀಡಿದ ವರದಿಗಳ ಪರಿಶೀಲನೆ, ಆಸ್ತಿ ಮಾಲೀಕರ ಶೀರ್ಷಿಕೆಯನ್ನು ಪರಿಶೀಲಿಸುವುದು ಮತ್ತು ಅಭಿಪ್ರಾಯ ನೀಡುವುದು;/ ಕಾನೂನು ದಾಖಲೆಗಳ ರಿವ್ಯೂ ಮತ್ತು ಪರಿಶೀಲನೆ ಮತ್ತು ಆಸ್ತಿ ಕಾನೂನು ಮತ್ತು ಭೂಮಿಯ ಇತರೆ ಸಂಬಂಧಿತ ಕಾನೂನುಗಳ ಪ್ರಕಾರ ವಸತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ತಮಗೆ ಇರುವ ಹಕ್ಕುಗಳ ಕುರಿತು ಗ್ರಾಹಕರಿಗೆ ಸಲಹೆ ನೀಡುವುದು- ಸ್ಥಳೀಯ ಮತ್ತು ಕೇಂದ್ರ ಕಾನೂನುಗಳ ಅಡಿಯಲ್ಲಿ ಸಂಸ್ಥೆಯ ಅನುಸರಣೆಯನ್ನು ಖಚಿತಪಡಿಸುವುದು, ರಜೆ ಮತ್ತು ಪರವಾನಗಿ ಒಪ್ಪಂದಗಳು/ಗುತ್ತಿಗೆ ಸಿಬ್ಬಂದಿ ಒಪ್ಪಂದಗಳು/ ಸೇವಾ ಒಪ್ಪಂದಗಳು, ಮುಚ್ಚಳಿಕೆಗಳು, ಘೋಷಣೆಗಳು, ಅಫಿಡವಿಟ್‌ಗಳು, ಟ್ರಸ್ಟ್ ಮತ್ತು ಸೆಕ್ಯುರಿಟಿ ನಷ್ಟ ಪರಿಹಾರ ಬಾಂಡ್‌ಗಳು, ಅಡಮಾನ ಪತ್ರಗಳು, ಮರು ಸಾಗಣೆ ಪತ್ರಗಳು, ಖಾತರಿ ಪತ್ರ ಮುಂತಾದವುಗಳ ಕರಡು ರಚಿಸುವುದು; ಗ್ರಾಹಕರು, ಶಾಸನಬದ್ಧ ಸಂಸ್ಥೆಗಳು ಇತ್ಯಾದಿಗಳಿಂದ ಪಡೆದ ಕಾನೂನು ನೋಟಿಸ್‌ಗಳು ಮತ್ತು ದೂರುಗಳಿಗೆ ಸಂಸ್ಥೆಯ ಪರವಾಗಿ ಪ್ರತ್ಯುತ್ತರಗಳನ್ನು ರಚಿಸುವುದು;

ಅಪೇಕ್ಷಿತ ಅಭ್ಯರ್ಥಿ ಪ್ರೊಫೈಲ್

ಅಪೇಕ್ಷಿತ ಅಭ್ಯರ್ಥಿಯ ಪ್ರೊಫೈಲ್- - ಆಸ್ತಿ ವರ್ಗಾವಣೆ ಕಾಯ್ದೆ, ಭಾರತೀಯ ಕಂಪನಿಗಳ ಕಾಯ್ದೆ, SARFAESI ಕಾಯ್ದೆ, ಭಾರತೀಯ ನೋಂದಣಿ ಕಾಯ್ದೆ, ಭಾರತೀಯ ಅಂಚೆಚೀಟಿಗಳ ಕಾಯ್ದೆ, RERA ಕಾಯ್ದೆಯ ವಿವಿಧ ನಿಬಂಧನೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಮತ್ತು ಅನ್ವಯವಾಗುವ ಸ್ಥಳೀಯ ಕಾನೂನುಗಳ ವಿಷಯದಲ್ಲಿ ಕೆಲಸ ಮಾಡಿದ ಜ್ಞಾನ ಇರಬೇಕು; ಅಭ್ಯರ್ಥಿಯು ಆಸ್ತಿ ಕಾನೂನುಗಳು, ಬಿಸಿನೆಸ್ ಕಾನೂನುಗಳು, ಸಾಂಸ್ಥಿಕ ಕಾನೂನುಗಳ ಬಗ್ಗೆ ಆಳವಾದ ತಿಳಿವಳಿಕೆ ಮತ್ತು ವಿವಿಧ ಕಾನೂನು ದಾಖಲೆಗಳನ್ನು ರಚಿಸುವ ಸಾಮರ್ಥ್ಯ ಹೊಂದಿರಬೇಕು. ಅಭ್ಯರ್ಥಿಯು ಇಂಗ್ಲಿಷ್ (ಮೌಖಿಕ ಮತ್ತು ಲಿಖಿತ) ಮೇಲೆ ಅತ್ಯುತ್ತಮ ಹಿಡಿತ ಹೊಂದಿರಬೇಕು ಮತ್ತು ಪ್ರಾದೇಶಿಕ ಭಾಷೆಯನ್ನು (ತಮಿಳು) ಓದಲು ತಿಳಿದಿರಬೇಕು. ಆಸ್ತಿ ವಹಿವಾಟುಗಳಿಗೆ ಅಗತ್ಯವಾದ ಕಾನೂನು ದಾಖಲೆಗಳ ಕುರಿತು ಸಾಮಾನ್ಯ ಜನರಿಗೆ ಗಣನೀಯ ತಾಳ್ಮೆ ಮತ್ತು ಸಹನೆಯೊಂದಿಗೆ ವಿವರಿಸುವ ಮತ್ತು ಮಾರ್ಗದರ್ಶನ ನೀಡುವ ಸಾಮರ್ಥ್ಯವನ್ನು ಅಭ್ಯರ್ಥಿ ಹೊಂದಿರಬೇಕು ಮತ್ತು ಆತ/ ಆಕೆಯ ಜ್ಞಾನವು ಬಿಸಿನೆಸ್‌ನ ಬೆಳವಣಿಗೆಯನ್ನು ಉತ್ತೇಜಿಸಬೇಕು. ನಮಗೆ ಸ್ವಯಂ ಸ್ಪೂರ್ತಿ ಹೊಂದುವ, ಒಳ್ಳೆಯ ಮಾತನಾಡುವ ಕಲೆ/ ತಂಡವಾಗಿ ಕೆಲಸ ಮಾಡುವ ಸಾಮರ್ಥ್ಯ ಇರುವ ಮತ್ತು ಗ್ರಾಹಕ ಸರ್ವಿಸ್‌ಗೆ ಸಮರ್ಪಣಾ ಮನೋಭಾವ ಹೊಂದಿರುವ ಅಭ್ಯರ್ಥಿ ಬೇಕಾಗಿದ್ದಾರೆ.