ಪ್ರೊಸೆಸಿಂಗ್ ಫೀಗಳು
ಲೋನ್ ಮೊತ್ತದ 0.50% ವರೆಗೆ ಅಥವಾ ₹3,000 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.
ಕನಿಷ್ಠ ರಿಟೆನ್ಶನ್ ಮೊತ್ತ: ಅನ್ವಯವಾಗುವ ಶುಲ್ಕದ 50% ಅಥವಾ ₹ 3,000 + ಅನ್ವಯವಾಗುವ ತೆರಿಗೆಗಳು, ಯಾವುದು ಅಧಿಕವೋ ಅದು.
ಬಾಹ್ಯ ಅಭಿಪ್ರಾಯದ ಆಧಾರದ ಮೇಲೆ ಶುಲ್ಕಗಳು
ವಕೀಲರು/ತಾಂತ್ರಿಕ ಮೌಲ್ಯಮಾಪಕರಿಂದ ಪಡೆದ ಬಾಹ್ಯ ಅಭಿಪ್ರಾಯದ ಆಧಾರದ ಮೇಲೆ ಶುಲ್ಕವನ್ನು ನಿರ್ದಿಷ್ಟ ಪ್ರಕರಣಕ್ಕೆ ಅನ್ವಯವಾಗುವಂತೆ ವಾಸ್ತವಿಕ ಆಧಾರದಲ್ಲಿ ಪಾವತಿಸಲಾಗುತ್ತದೆ. ಅಂತಹ ಶುಲ್ಕವನ್ನು ನೇರವಾಗಿ ಸಂಬಂಧಪಟ್ಟ ವಕೀಲರಿಗೆ/ತಾಂತ್ರಿಕ ಮೌಲ್ಯಮಾಪಕರಿಗೆ ಅವರು ನೀಡಿದ ಸಹಾಯಕ್ಕೆ ಪ್ರತಿಯಾಗಿ ಪಾವತಿಸಲಾಗುತ್ತದೆ.
ಆಸ್ತಿ ಇನ್ಶೂರೆನ್ಸ್
ಲೋನ್ ಬಾಕಿ ಇರುವ ಅವಧಿಯುದ್ದಕ್ಕೂ ಪಾಲಿಸಿ/ಪಾಲಿಸಿಗಳನ್ನು ಚಾಲ್ತಿಯಲ್ಲಿಡಲು ಗ್ರಾಹಕರು ಪ್ರೀಮಿಯಂ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮತ್ತು ನಿರಂತರವಾಗಿ ಇನ್ಶೂರೆನ್ಸ್ ಸೇವಾದಾತರಿಗೆ ಪಾವತಿಸುತ್ತಾರೆ.
ವಿಳಂಬ ಪಾವತಿಗಳ ಕಾರಣದ ಶುಲ್ಕಗಳು
ಬಡ್ಡಿ ಅಥವಾ EMI ಪಾವತಿಯಲ್ಲಿ ವಿಳಂಬವಾದರೆ, ಗ್ರಾಹಕರು ವಾರ್ಷಿಕ 24% ವರೆಗೆ ಹೆಚ್ಚುವರಿ ಬಡ್ಡಿ ಪಾವತಿಸಬೇಕಾಗುತ್ತದೆ.
ಪ್ರಾಸಂಗಿಕ ಶುಲ್ಕಗಳು
ಡೀಫಾಲ್ಟ್ ಗ್ರಾಹಕರಿಂದ ಬಾಕಿ ವಸೂಲಿಗೆ ಸಂಬಂಧಿಸಿದ ವೆಚ್ಚಗಳು, ಶುಲ್ಕಗಳು, ಖರ್ಚುಗಳು ಮತ್ತು ಇತರ ಹಣಕಾಸನ್ನು ಭರಿಸಲು ಪ್ರಾಸಂಗಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. ವಿನಂತಿಯ ಮೇರೆಗೆ ಸಂಬಂಧಿಸಿದ ಶಾಖೆಯಿಂದ ಗ್ರಾಹಕರು ಪಾಲಿಸಿಯ ಪ್ರತಿಯನ್ನು ಪಡೆಯಬಹುದು.
ಕಾನೂನುಬದ್ಧ / ನಿಯಂತ್ರಕ ಶುಲ್ಕಗಳು
ಸ್ಟಾಂಪ್ ಡ್ಯೂಟಿ / MOD / MOE / ಸೆಂಟ್ರಲ್ ರಿಜಿಸ್ಟ್ರಿಯ ಅಫ್ ಸೆಕ್ಯುರಿಟೀಸಷನ್ ಅಸೆಟ್ ರಿಕನ್ಸ್ಟ್ರಕ್ಷನ್ ಅಂಡ್ ಸೆಕ್ಯೂರಿಟಿ ಇಂಟರೆಸ್ಟ್ ಅಫ್ ಇಂಡಿಯಾ (CERSAI) ಅಥವಾ ಇತರ ಶಾಸನಬದ್ಧ / ನಿಯಂತ್ರಕ ಸಂಸ್ಥೆಗಳ ಕಾರಣದಿಂದ ಅನ್ವಯಿಸುವ ಎಲ್ಲಾ ಶುಲ್ಕಗಳು ಮತ್ತು ಅನ್ವಯಿಸುವ ತೆರಿಗೆಗಳು ಗ್ರಾಹಕರು ಭರಿಸಬೇಕು ಮತ್ತು ಪಾವತಿಸಬೇಕು (ಅಥವಾ ಕೆಲವು ಸಂದರ್ಭದಲ್ಲಿ ಮರುಪಾವತಿಸಲಾಗುತ್ತದೆ) www.cersai.org.in ನಲ್ಲಿ ಅಂತಹ ಎಲ್ಲಾ ಶುಲ್ಕಗಳಿಗೆ CERSAI ನ ವೆಬ್ಸೈಟಿಗೆ ನೀವು ಭೇಟಿ ನೀಡಬಹುದು
ಇತರೆ ಶುಲ್ಕಗಳು
ಬಗೆ |
ಶುಲ್ಕಗಳು |
ಚೆಕ್ ಡಿಸ್ಹಾನರ್ ಶುಲ್ಕಗಳು |
₹300** |
ಡಾಕ್ಯುಮೆಂಟ್ಗಳ ಪಟ್ಟಿ |
₹ 500 ವರೆಗೆ |
ಡಾಕ್ಯುಮೆಂಟ್ಗಳ ಫೋಟೋ ಕಾಪಿ |
₹ 500 ವರೆಗೆ |
PDC ಸ್ವ್ಯಾಪ್ |
₹ 500 ವರೆಗೆ |
ವಿತರಣೆ ನಂತರ ವಿತರಣೆಯಾದ ಚೆಕ್ ರದ್ದತಿ ಶುಲ್ಕ |
₹ 500 ವರೆಗೆ |
ಅನುಮೋದನೆಯ 6 ತಿಂಗಳುಗಳ ನಂತರ ಲೋನ್ನ ಮರು-ಮೌಲ್ಯಮಾಪನ |
₹ 2,000 ವರೆಗೆ ಹಾಗೂ ಅನ್ವಯವಾಗುವ ತೆರಿಗೆಗಳು |
ಎಚ್ ಡಿ ಎಫ್ ಸಿ ಮ್ಯಾಕ್ಸ್ವೆಂಟೇಜ್ ಯೋಜನೆ ಅಡಿಯಲ್ಲಿ ತಾತ್ಕಾಲಿಕ ಪೂರ್ವ ಪಾವತಿಯ ರಿವರ್ಸಲ್ |
ರಿವರ್ಸಲ್ ಸಮಯದಲ್ಲಿ ₹250/- ಜೊತೆಗೆ ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು |