ಭಾರತದಲ್ಲಿ ಹೋಮ್ ಲೋನ್ ಪ್ರೊಸೆಸ್ ಸಾಮಾನ್ಯವಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸುತ್ತದೆ:
ಹೋಮ್ ಲೋನ್ ಅಪ್ಲಿಕೇಶನ್ ಮತ್ತು ಡಾಕ್ಯುಮೆಂಟೇಶನ್
ಎಚ್ ಡಿ ಎಫ್ ಸಿ ಯ ಆನ್ಲೈನ್ ಅಪ್ಲಿಕೇಶನ್ ಫೀಚರ್ನೊಂದಿಗೆ ನೀವು ನಿಮ್ಮ ಮನೆಯಿಂದಲೇ ಸುಲಭ ಮತ್ತು ಆರಾಮವಾಗಿ ಹೋಮ್ ಲೋನ್ಗೆ ಆನ್ಲೈನ್ನಲ್ಲಿ ಅಪ್ಲೈ ಮಾಡಬಹುದು. ಪರ್ಯಾಯವಾಗಿ, ನಮ್ಮ ಲೋನ್ ತಜ್ಞರು ನಿಮ್ಮನ್ನು ಸಂಪರ್ಕಿಸಲು ಮತ್ತು ನಿಮ್ಮ ಲೋನ್ ಅಪ್ಲಿಕೇಶನ್ ಅನ್ನು ಮುಂದಕ್ಕೆ ಕೊಂಡೊಯ್ಯಲು ನೀವು ನಿಮ್ಮ ಸಂಪರ್ಕದ ವಿವರಗಳನ್ನು ಇಲ್ಲಿ ಶೇರ್ ಮಾಡಬಹುದು.
ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್ ಜೊತೆಗೆ ಸಲ್ಲಿಸಬೇಕಾದ ಡಾಕ್ಯುಮೆಂಟೇಶನ್ ಮಾಹಿತಿ ಇಲ್ಲಿ ಲಭ್ಯವಿದೆ. ಈ ಲಿಂಕ್ ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ ಪ್ರೊಸೆಸ್ಗೆ ಅಗತ್ಯವಿರುವ KYC, ಆದಾಯ ಮತ್ತು ಆಸ್ತಿ ಸಂಬಂಧಿತ ಡಾಕ್ಯುಮೆಂಟ್ಗಳ ವಿವರವಾದ ಚೆಕ್ಲಿಸ್ಟ್ ಅನ್ನು ಒದಗಿಸುತ್ತದೆ. ಚೆಕ್ಲಿಸ್ಟ್ ಸೂಚನಾತ್ಮಕವಾಗಿದೆ ಮತ್ತು ಹೋಮ್ ಲೋನ್ ಮಂಜೂರಾತಿ ಪ್ರೊಸೆಸ್ನಲ್ಲಿ ಹೆಚ್ಚುವರಿ ಡಾಕ್ಯುಮೆಂಟ್ಗಳನ್ನು ಕೇಳಬಹುದಾಗಿದೆ.
ಹೋಮ್ ಲೋನ್ ಮಂಜೂರಾತಿ ಮತ್ತು ವಿತರಣೆ
ಮಂಜೂರಾತಿ ಪ್ರೊಸೆಸ್: ಮೇಲೆ ತಿಳಿಸಿದ ಚೆಕ್ಲಿಸ್ಟ್ ಪ್ರಕಾರ ಸಲ್ಲಿಸಿದ ಡಾಕ್ಯುಮೆಂಟ್ಗಳ ಆಧಾರದ ಮೇಲೆ ಹೋಮ್ ಲೋನ್ ಅನ್ನು ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅನುಮೋದಿತ ಮೊತ್ತವನ್ನು ಗ್ರಾಹಕರಿಗೆ ತಿಳಿಸಲಾಗುತ್ತದೆ. ಅಪ್ಲೈ ಮಾಡಿದ ಹೌಸಿಂಗ್ ಲೋನ್ ಮೊತ್ತ ಮತ್ತು ಅನುಮೋದಿತ ಮೊತ್ತದ ನಡುವೆ ವ್ಯತ್ಯಾಸವಿರಬಹುದು. ಹೌಸಿಂಗ್ ಲೋನ್ ಅನುಮೋದನೆಯ ನಂತರ, ಲೋನ್ ಮೊತ್ತ, ಕಾಲಾವಧಿ, ಅನ್ವಯವಾಗುವ ಬಡ್ಡಿ ದರ, ಮರುಪಾವತಿ ವಿಧಾನ ಮತ್ತು ಅರ್ಜಿದಾರರು ಪೂರೈಸಬೇಕಾದ ಇತರ ವಿಶೇಷ ಷರತ್ತುಗಳನ್ನು ವಿವರಿಸುವ ಮಂಜೂರಾತಿ ಪತ್ರವನ್ನು ನೀಡಲಾಗುತ್ತದೆ.
ವಿತರಣೆ ಪ್ರೊಸೆಸ್: ಎಚ್ ಡಿ ಎಫ್ ಸಿ ಗೆ ಮೂಲ ಆಸ್ತಿ ಸಂಬಂಧಿತ ಡಾಕ್ಯುಮೆಂಟ್ಗಳನ್ನು ಸಲ್ಲಿಸುವುದರೊಂದಿಗೆ ಹೋಮ್ ಲೋನ್ ವಿತರಣೆ ಪ್ರೊಸೆಸ್ ಆರಂಭವಾಗುತ್ತದೆ. ಒಂದು ವೇಳೆ ಆಸ್ತಿಯು ನಿರ್ಮಾಣ ಹಂತದಲ್ಲಿದ್ದರೆ, ಡೆವಲಪರ್ ಒದಗಿಸಿದ ನಿರ್ಮಾಣಕ್ಕೆ ಲಿಂಕ್ ಆದ ಪಾವತಿ ಪ್ಲಾನ್ ಪ್ರಕಾರ ಕಂತು ಕಂತುಗಳಲ್ಲಿ ವಿತರಣೆ ಮಾಡಲಾಗುತ್ತದೆ. ನಿರ್ಮಾಣ/ಮನೆ ಸುಧಾರಣೆ/ಮನೆ ವಿಸ್ತರಣೆ ಲೋನ್ಗಳ ಸಂದರ್ಭದಲ್ಲಿ, ಒದಗಿಸಿದ ಅಂದಾಜಿನ ಪ್ರಕಾರ ನಿರ್ಮಾಣ/ಸುಧಾರಣೆಯ ಪ್ರಗತಿಗೆ ಅನುಗುಣವಾಗಿ ವಿತರಣೆ ಮಾಡಲಾಗುತ್ತದೆ. ಎರಡನೇ ಮಾರಾಟ / ಮರುಮಾರಾಟ ಆಸ್ತಿಗಳಲ್ಲಿ ಮಾರಾಟ ಪತ್ರವನ್ನು ಕಾರ್ಯಗತಗೊಳಿಸುವ ಸಮಯದಲ್ಲಿ ಸಂಪೂರ್ಣ ಲೋನ್ ಮೊತ್ತವನ್ನು ವಿತರಿಸಲಾಗುತ್ತದೆ.
ಹೋಮ್ ಲೋನ್ ಮರುಪಾವತಿ
ಹೋಮ್ ಲೋನ್ಗಳ ಮರುಪಾವತಿಯನ್ನು ಸಮನಾದ ಮಾಸಿಕ ಕಂತುಗಳ (EMI) ಮೂಲಕ ಮಾಡಲಾಗುತ್ತದೆ, ಇದು ಬಡ್ಡಿ ಮತ್ತು ಅಸಲಿನ ಸಂಯೋಜನೆಯಾಗಿದೆ. ಮರುಮಾರಾಟದ ಮನೆಗಳಿಗೆ ಪಡೆದ ಲೋನ್ಗಳ ಸಂದರ್ಭದಲ್ಲಿ, ಲೋನ್ ವಿತರಣೆ ಮಾಡಿದ ನಂತರದ ತಿಂಗಳಿನಿಂದ EMI ಆರಂಭವಾಗುತ್ತದೆ. ನಿರ್ಮಾಣದ ಹಂತದಲ್ಲಿರುವ ಆಸ್ತಿಗಳ ಲೋನ್ಗಳ ಸಂದರ್ಭದಲ್ಲಿ, ನಿರ್ಮಾಣ ಪೂರ್ಣಗೊಂಡ ನಂತರ ಮತ್ತು ಹೌಸ್ ಲೋನ್ ಸಂಪೂರ್ಣವಾಗಿ ವಿತರಣೆಯಾದ ನಂತರ EMI ಸಾಮಾನ್ಯವಾಗಿ ಆರಂಭವಾಗುತ್ತದೆ. ಆದಾಗ್ಯೂ ಗ್ರಾಹಕರು ತಮ್ಮ EMI ಗಳನ್ನು ಬೇಗನೆ ಆರಂಭಿಸಲು ಕೂಡ ಆಯ್ಕೆ ಮಾಡಬಹುದು. ನಿರ್ಮಾಣದ ಪ್ರಗತಿಯ ಪ್ರಕಾರ ಮಾಡಿದ ಪ್ರತಿಯೊಂದು ಭಾಗಶಃ ಲೋನ್ ವಿತರಣೆಗೆ ಅನುಗುಣವಾಗಿ EMI ಗಳು ಹೆಚ್ಚಾಗುತ್ತವೆ.