ಮನೆ ಖರೀದಿ ಜೀವಮಾನದ ಒಂದು ದೊಡ್ಡ ಮತ್ತು ಅತ್ಯಂತ ಪ್ರಮುಖ ನಿರ್ಧಾರವಾಗಿದೆ. ಒಂದು ಉತ್ತಮ ಮನೆ ಕುಟುಂಬದ ಎಲ್ಲಾ ರೀತಿಯ ಸುರಕ್ಷತೆಗೆ ಅಗತ್ಯವಾಗಿದೆ. ಆದ್ದರಿಂದ ಖರೀದಿಯಲ್ಲಿ ಸರಿಯಾದ ಯೋಜನೆ ಮತ್ತು ಎಚ್ಚರಿಕೆಯ ಪರಿಗಣನೆ ಅಗತ್ಯವಾಗಿದೆ. ನೀವು ನಿಮ್ಮ ಅವಶ್ಯಕತೆಯನ್ನು ಮೌಲ್ಯಮಾಪನ ಮಾಡಬೇಕು ಮತ್ತು ಅತ್ಯಂತ ಸೂಕ್ತವಾದ ಹೌಸಿಂಗ್ ಲೋನ್ಗೆ ಅಪ್ಲೈ ಮಾಡಬೇಕು.
ವಿವಿಧ ವರ್ಗದ ಗ್ರಾಹಕರ ಅನೇಕ ರೀತಿಯ ಬೇಡಿಕೆಗಳನ್ನು ಪೂರೈಸಲು ಎಚ್ ಡಿ ಎಫ್ ಸಿ ವಿವಿಧ ಶ್ರೇಣಿಯ ಹೌಸಿಂಗ್ ಲೋನನ್ನು ಆಫರ್ ಮಾಡುತ್ತದೆ. ನಮ್ಮ ಲೋನಿನ ವೈವಿಧ್ಯೀಕರಿಸಿದ ಬಂಡವಾಳ ಪಟ್ಟಿ ಡೆವಲಪರ್ ಅಥವಾ ಅಭಿವೃದ್ಧಿ ಪ್ರಾಧಿಕಾರ ಮೂಲಕ ಹೊಸ ಅಪಾರ್ಟ್ಮೆಂಟ್ ಖರೀದಿಗೆ ಜತೆಗೆ ಮರುಮಾರಾಟದ ಆಸ್ತಿ ಖರೀದಿಗೆ ಲೋನ್ಗಳನ್ನು ಆಫರ್ ಮಾಡುತ್ತದೆ.
ನೀವು ನಿಮ್ಮದೇ ಆದ ಮನೆಯನ್ನು ಕಟ್ಟಲು ಬಯಸಿದರೆ, ಪ್ಲಾಟ್ ಖರೀದಿಗೆ ಮತ್ತು ಅದರ ನಿರ್ಮಾಣಕ್ಕೆ ನೀವು ಲೋನ್ ಅನ್ನು ಪಡೆದುಕೊಳ್ಳುತ್ತೀರಿ.
ಹೋಮ್ ಇಂಪ್ರೂಮೆಂಟ್ ಲೋನ್ ಮನೆ ನವೀಕರಣಕ್ಕೆ ಸಹಾಯವಾಗುತ್ತದೆ ಹಾಗೆಯೇ ಹೆಚ್ಚಿನ ಫ್ಲೋರ್ಗಳನ್ನು ಸೇರಿಸಲು ಅಥವಾ ಈಗಿನ ನಿಮ್ಮ ಮನೆಗೆ ಕೋಣೆಗಳನ್ನು ಸೇರಿಸುವ ವೆಚ್ಚವನ್ನು ಭರಿಸಲು ನೀವು ಹೋಮ್ ಎಕ್ಸ್ಟೆನ್ಶನ್ ಲೋನ್ ಅನ್ನು ಪಡೆದುಕೊಳ್ಳಬಹುದು.
ಲೋನ್ ಮರುಪಾವತಿಯ ಒಂದು ವರ್ಷ ಪೂರ್ಣಗೊಳಿಸಿದ ನಂತರ, ನೀವು ಹೆಚ್ಚುವರಿ ಹಣಕಾಸಿಗಾಗಿ ಟಾಪ್ ಅಪ್ ಲೋನಿಗೆ ಅಪ್ಲೈ ಮಾಡಬಹುದು ಅದನ್ನು ವಿವಿಧ ಖಾಸಗಿ ಮತ್ತು ವೃತ್ತೀಯ ಅಗತ್ಯತೆಗಳಿಗೆ ಬಳಸಿಕೊಳ್ಳಬಹುದು.
ನಾವು ರೈತರು, ಕೃಷಿಕರು, ತೋಟಗಾರರು, ತೋಟಗಾರಿಕಾ ತಜ್ಞರಿಗೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಸತಿ ಆಸ್ತಿ ಖರೀದಿಗೆ, ಮನೆ ನಿರ್ಮಾಣ ಮತ್ತು ಅಸ್ತಿತ್ವದಲ್ಲಿರುವ ವಸತಿ ಆಸ್ತಿಯ ಸುಧಾರಣೆ ಅಥವಾ ವಿಸ್ತರಣೆಗೆ ಗ್ರಾಮೀಣ ಹೌಸಿಂಗ್ ಲೋನ್ಗಳನ್ನು ಕೂಡ ಆಫರ್ ಮಾಡುತ್ತೇವೆ,.
ಇನ್ನೊಂದು ವಿಶೇಷ ಪ್ರಾಡಕ್ಟ್ ಎಂದರೆ ಎಚ್ ಡಿ ಎಫ್ ಸಿ ರೀಚ್ ಹೋಮ್ ಲೋನ್, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ರೂಪಿಸಲಾಗಿದೆ. ನಮ್ಮ ವಿಶೇಷ ಮೌಲ್ಯಮಾಪನ ವಿಧಾನ ಈಗ ಈ ವಿಭಾಗಕ್ಕೆ ಮನೆ ಮಾಲೀಕತ್ವವನ್ನು ಸಾಧ್ಯವನ್ನಾಗಿಸಿದೆ.
ಮೊದಲ ಬಾರಿಯ ಮನೆ ಮಾಲೀಕರು ಪ್ರಧಾನ ಮಂತ್ರಿ ಆವಾಸ್ ಯೋಜನೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ ಮೂಲಕ ಪ್ರಯೋಜನ ಪಡೆಯಬಹುದು ಮತ್ತು ನಿಮ್ಮ ಹೋಮ್ ಲೋನ್ ಮೊತ್ತದ ಮೇಲೆ ₹ 2.67 ಲಕ್ಷದವರೆಗೆ ಸಬ್ಸಿಡಿ ಪಡೆಯಬಹುದು.
ಒಂದು ವೇಳೆ ನೀವು ಅಸ್ತಿತ್ವದಲ್ಲಿರುವ ಹೋಮ್ ಲೋನ್ ಹೊಂದಿದ್ದರೆ, ನೀವು ಎಚ್ ಡಿ ಎಫ್ ಸಿಗೆ ಬ್ಯಾಲೆನ್ಸ್ ವರ್ಗಾವಣೆಯನ್ನು ಆಯ್ಕೆ ಮಾಡಬಹುದು ಮತ್ತು ಕಡಿಮೆ ಹೋಮ್ ಲೋನ್ ಬಡ್ಡಿ ದರಗಳು, ಉತ್ತಮ ಮರುಪಾವತಿ ನಿಯಮಗಳು ಮತ್ತು ವರ್ಧಿತ ಸೇವೆಗಳ ಪ್ರಯೋಜನವನ್ನು ಪಡೆಯಬಹುದು.
ನಿಮಗೆ ಅನುಕೂಲವಾಗುವಂತೆ, ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ನಿಮ್ಮ ವೆಬ್ಸೈಟಿನ 'ಅಪ್ಲೈ ಆನ್ಲೈನ್' ಫೀಚರ್ ಮೂಲಕ ನೀವು ಲೋನಿಗೆ ಅಪ್ಲೈ ಮಾಡಬಹುದು. ನಮ್ಮ ಆನ್ಲೈನ್ ಹೋಮ್ ಲೋನ್ ಅಪ್ಲಿಕೇಶನ್ ಸುಲಭ ಡಾಕ್ಯುಮೆಂಟ್ ಅಪ್ಲೋಡ್, ಫೀಸಿನ ಆನ್ಲೈನ್ ಪಾವತಿ ಮತ್ತು ಶೀಘ್ರ ಹೋಮ್ ಲೋನ್ ಅನುಮೋದನೆಯೊಂದಿಗೆ ಸರಳ 3- ಹಂತದ ಪ್ರಕ್ರಿಯೆಯನ್ನು ಒಳಗೊಂಡಿದೆ.