ಎಚ್ ಡಿ ಎಫ್ ಸಿ ರೀಚ್ ಹೋಮ್ ಲೋನ್

ನೀವು ನಿಮ್ಮ ಕುಟುಂಬಕ್ಕೆ ಆರಾಮ ಮತ್ತು ಭದ್ರತೆಯನ್ನು ನೀಡಲು ಬಯಸುತ್ತೀರಿ. ಅದರ ಮೊದಲ ಹಂತ ಮನೆಯಾಗಿದೆ. ಎಚ್ ಡಿ ಎಫ್ ಸಿ ರೀಚ್ ಹೋಮ್ ಲೋನ್‌ಗಳನ್ನು (ಎಚ್ ಡಿ ಎಫ್ ಸಿ ರೀಚ್) ಪಡೆಯುವ ಮೂಲಕ ನೀವು ಯಾವಾಗಲೂ ಬಯಸುತ್ತಿದ್ದ ಮನೆಯನ್ನು, ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಿ.

ಎಚ್ ಡಿ ಎಫ್ ಸಿ ರೀಚ್ ಅನ್ನು ವಿಶೇಷವಾಗಿ, ಅಗತ್ಯವಿರುವ ಆದಾಯ ಡಾಕ್ಯುಮೆಂಟ್‌ಗಳನ್ನು ಹೊಂದಿರಬಹುದಾದ ಅಥವಾ ಹೊಂದಿರದ ಅತಿ ಸಣ್ಣ ಉದ್ಯಮಿಗಳು ಮತ್ತು ಸಂಬಳ ಪಡೆಯುವ ವ್ಯಕ್ತಿಗಳಿಗೆ ಮನೆ ಖರೀದಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ, ನೀವು ಹಣ್ಣು / ತರಕಾರಿ ಅಂಗಡಿ, ಕಿರಾಣಿ ಅಂಗಡಿ, ಫಾರ್ಮಸಿ, ಸಲೂನ್, ಫಾಸ್ಟ್ ಫುಡ್ ಔಟ್ಲೆಟ್ ಅಥವಾ ಇತರ ಯಾವುದೇ ಬಿಸಿನೆಸ್ ಹೊಂದಿದ್ದರೆ; ಬಡಗಿ, ಪ್ಲಂಬರ್, ಟೈಲರ್ ಮುಂತಾದ ಕೌಶಲ್ಯ ಹೊಂದಿರುವ ವೃತ್ತಿಪರರಾಗಿದ್ದಾರೆ; SME ವಲಯದ ಉದ್ಯೋಗಿ ಅಥವಾ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರೆ, ಎಚ್ ಡಿ ಎಫ್ ಸಿ ರೀಚ್ ನಿಮಗಾಗಿ ಇರುವ ಸರಿಯಾದ ಪ್ರಾಡಕ್ಟ್ ಆಗಿದೆ.

ವಿಶಿಷ್ಟ ಲೋನ್ ಮೌಲ್ಯಮಾಪನ ತಂತ್ರಗಳು ಮತ್ತು ಹೊಂದಿಕೊಳ್ಳುವ ಅರ್ಹತಾ ಮಾನದಂಡಗಳೊಂದಿಗೆ, ಎಚ್ ಡಿ ಎಫ್ ಸಿ ಯು ಸಂಪೂರ್ಣ ಲೋನ್ ಪ್ರೊಸೆಸ್‌ನಲ್ಲಿ ನಿಮಗೆ ಸಹಾಯ ಮಾಡುವ ಮೂಲಕ ಹೋಮ್ ಲೋನ್ ಪಡೆಯುವುದನ್ನು ಸುಲಭವಾಗಿಸುತ್ತದೆ. ನಿಮ್ಮ ಮನೆಯ ಖರೀದಿ ಅಥವಾ ನಿರ್ಮಾಣ, ನಿಮ್ಮ ಬಿಸಿನೆಸ್ ನಡೆಸಲು ಮಳಿಗೆ/ಆಫೀಸ್ ಖರೀದಿ ಅಥವಾ ಭೂಮಿ ಖರೀದಿಸಲು ನೀವು ಲೋನ್ ಅನ್ನು ಪಡೆಯಬಹುದು.

ಎಚ್ ಡಿ ಎಫ್ ಸಿ ರೀಚ್‌ನೊಂದಿಗೆ, ನೀವು ಕನಿಷ್ಠ ಆದಾಯ ಡಾಕ್ಯುಮೆಂಟ್‌ಗಳೊಂದಿಗೆ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು. ಪ್ರಧಾನ್ ಮಂತ್ರಿ ಆವಾಸ್ ಯೋಜನೆ - ಕ್ರೆಡಿಟ್ ಲಿಂಕ್ ಆದ ಸಬ್ಸಿಡಿ ಯೋಜನೆಯಿಂದ ಕೂಡ ನೀವು ಪ್ರಯೋಜನ ಪಡೆಯಬಹುದು ಮತ್ತು ನಿಮ್ಮ ಹೌಸಿಂಗ್ ಲೋನ್ ಮೇಲೆ ₹ 2.67 ಲಕ್ಷದವರೆಗಿನ ಸಬ್ಸಿಡಿ ಪಡೆಯಬಹುದು.

ಇನ್ನು ಕಾಯಬೇಡಿ! ಎಚ್ ಡಿ ಎಫ್ ಸಿ ರೀಚ್ ಹೋಮ್ ಲೋನ್‌ಗಳೊಂದಿಗೆ ಮನೆ-ಮಾಲೀಕರಾಗುವ ನಿಮ್ಮ ಕನಸನ್ನು ನನಸಾಗಿಸಲು ಮೊದಲ ಹಂತವನ್ನು ತೆಗೆದುಕೊಳ್ಳಿ.

  • ಒಂದು ಹೊಸ ಅಥವಾ ಅಸ್ತಿತ್ವದಲ್ಲಿರುವ ಮನೆ ಖರೀದಿಸಲು ವಿಶೇಷವಾಗಿ ವಿನ್ಯಾಸಗೊಳಿಸಿದ ಲೋನ್
  • ಮುಕ್ತ ನೆಲ ಅಥವಾ ಲೀಸ್ ನೆಲ ಅಥವಾ ಅಭಿವೃದ್ಧಿ ಪ್ರಾಧಿಕಾರ ಮಂಜೂರು ಮಾಡಿದ ನೆಲದಲ್ಲಿ ನಿಮ್ಮ ಮನೆ ನಿರ್ಮಿಸಿ
  • ಮತ್ತೊಂದು ಬ್ಯಾಂಕಿನಿಂದ ಅಥವಾ ಫೈನಾನ್ಸಿಯಲ್ ಸಂಸ್ಥೆಯಿಂದ ಪಡೆದು ಬಾಕಿ ಉಳಿದ ಹೋಮ್ ಲೋನ್ ಎಚ್ ಡಿ ಎಫ್ ಸಿ ವರ್ಗಾಯಿಸಿ
  • ಫ್ಲೋರಿಂಗ್ ಮತ್ತು ಟೈಲಿಂಗ್, ಒಳಗೆ ಮತ್ತು ಹೊರಗೆ ಪ್ಲಾಸ್ಟರ್ ಮತ್ತು ಚಿತ್ರಕಲೆ ಮುಂತಾದ ಅನೇಕ ವಿಧಗಳಲ್ಲಿ ನಿಮ್ಮ ಮನೆಗಳನ್ನು ಉತ್ತಮಗೊಳಿಸಿ
  • ಹೆಚ್ಚು ಕೊಠಡಿಗಳು ಇತ್ಯಾದಿಗಳಿಂದ ನಿಮ್ಮ ಮನೆಯ ಸ್ಥಳವನ್ನು ವಿಸ್ತರಿಸಿ / ಸೇರಿಸಿ
  • ವಿವಿಧ ವೈಯಕ್ತಿಕ ಅಥವಾ ವೃತ್ತಿಪರ ಅಗತ್ಯಗಳಿಗಾಗಿ ಟಾಪ್-ಅಪ್ ಲೋನ್ ಪಡೆಯಿರಿ
  • ನೆಲವನ್ನು ಖರೀದಿಸಿ
  • ಅನಿವಾಸೀಯ ಆವರಣದ ಖರೀದಿ / ನಿರ್ಮಾಣ / ವಿಸ್ತರಣೆ ಅಥವಾ ಸುಧಾರಣೆ
  • ಕನಿಷ್ಠ ಆದಾಯ ₹ 10,000 ಪ್ರತಿ ತಿಂಗಳಿಗೆ ಮತ್ತು ಕನಿಷ್ಠ ₹ 2 ಲಕ್ಷ ವಾರ್ಷಿಕ ಆದಾಯ ಹೊಂದಿರುವ ಸ್ವಯಂ ಉದ್ಯೋಗಿಗಳಿಗೆ ಹೋಮ್ ಲೋನ್‌ಗಳು.
  • ಆಕರ್ಷಕ ಬಡ್ಡಿ ದರಗಳು
  • ಯಾವುದೇ ಅಡಗಿದ ಶುಲ್ಕಗಳಿಲ್ಲ
  • ನಿಮ್ಮ ಹೋಮ್ ಲೋನ್ ಮೇಲೆ ಮನೆಬಾಗಿಲಿನ ಸೇವೆ
  • ಮನೆ ಖರೀದಿಯಲ್ಲಿ ಸರಿಯಾದ ನಿರ್ಧಾರವನ್ನು ಮಾಡಲು ನಿಮಗೆ ಸಹಾಯವಾಗಿ ಪರಿಣಿತ ಕಾನೂನು ಮತ್ತು ತಾಂತ್ರಿಕ ಸಲಹೆಯನ್ನು ಕೊಡಮಾಡುತ್ತೇವೆ

ಬಡ್ಡಿ ದರಗಳು

ರೀಚ್ ಹೋಮ್ ಲೋನ್‌ಗಳಿಗಾಗಿ, ಹೌಸ್ ನವೀಕರಣ ಲೋನ್ ಮತ್ತು ಹೋಮ್ ಎಕ್ಸ್‌ಟೆನ್ಶನ್ ಲೋನ್

ಟ್ರು-ಫಿಕ್ಸೆಡ್ - 3 ವರ್ಷಗಳು

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಯಾವುದೇ ಲೋನ್ ಮೊತ್ತ8.75 ನಿಂದ 14.00

ಮೇಲಿನ ದರಗಳು ಸೂಚನೆ ಇಲ್ಲದೆ ಬದಲಾವಣೆಗೆ ಒಳಪಟ್ಟಿರುತ್ತವೆ. ನಿಯಮಗಳು ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಟಾಪ್-ಅಪ್ ಲೋನ್‌ಗಳು ಮತ್ತು ರೆಸಿಡೆನ್ಶಿಯಲ್ ಪ್ಲಾಟ್ ಲೋನ್‌ಗಳಿಗಾಗಿ

ಟ್ರು-ಫಿಕ್ಸೆಡ್ - 3 ವರ್ಷಗಳು

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಯಾವುದೇ ಲೋನ್ ಮೊತ್ತ9.25 ನಿಂದ 14.50

ಮೇಲಿನ ದರಗಳು ಸೂಚನೆ ಇಲ್ಲದೆ ಬದಲಾವಣೆಗೆ ಒಳಪಟ್ಟಿರುತ್ತವೆ. ನಿಯಮಗಳು ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ವಸತಿಯೇತರ ಜಾಗಗಳಿಗೆ (ಬಿಲ್ಟ್-ಅಪ್) ಮತ್ತು ಆಸ್ತಿ ಮೇಲಿನ ಲೋನ್

ಟ್ರು-ಫಿಕ್ಸೆಡ್ - 3 ವರ್ಷಗಳು

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ಬಡ್ಡಿ ದರಗಳು (% ವರ್ಷಕ್ಕೆ)
ಯಾವುದೇ ಲೋನ್ ಮೊತ್ತ9.75 ನಿಂದ 15.00

ಮೇಲಿನ ದರಗಳು ಸೂಚನೆ ಇಲ್ಲದೆ ಬದಲಾವಣೆಗೆ ಒಳಪಟ್ಟಿರುತ್ತವೆ. ನಿಯಮಗಳು ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಹೋಮ್ ಲೋನ್ ವಿವರಗಳಿಗೆ ಹೋಗಿ

ಹೋಮ್ ಲೋನ್ಗಳಿಗಾಗಿ ನೀವು ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಅಪ್ಲೈ ಮಾಡಬಹುದು. ಆಸ್ತಿಯ ಎಲ್ಲಾ ಪ್ರಸ್ತಾಪಿತ ಮಾಲೀಕರು ಸಹ-ಅರ್ಜಿದಾರ ರಾಗಿ ಇರಬೇಕು.

ಯಾರು ಅಪ್ಲೈ ಮಾಡಬಹುದು?

ಪ್ರಧಾನ ಅರ್ಜಿದಾರ
  • ವಯಸ್ಸು

    21-65 ವರ್ಷಗಳು

  • ವೃತ್ತಿ

    ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ

  • ರಾಷ್ಟ್ರೀಯತೆ

    ಭಾರತೀಯ ನಿವಾಸಿ

  • ಲಿಂಗ

    ಎಲ್ಲಾ ಲಿಂಗಗಳು

ನಿಮ್ಮ ಮನೆಯನ್ನು ಪ್ಲಾನ್ ಮಾಡಿ
ಸಹ-ಅರ್ಜಿದಾರ(ರು)
  • ಸಹ-ಅರ್ಜಿದಾರರನ್ನು ಸೇರಿಸುವುದರಿಂದ ಲೋನ್ ಮೊತ್ತವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

  • ಮಹಿಳಾ ಸಹ- ಅರ್ಜಿದಾರರನ್ನು ಸೇರಿಸಿಕೊಳ್ಳುವುದರಿಂದ ಉತ್ತಮ ಬಡ್ಡಿ ದರಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.

  • ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರು ಆಗಿರಬೇಕಾಗಿಲ್ಲ. ಸಾಮಾನ್ಯವಾಗಿ ಸಹ-ಅರ್ಜಿದಾರರು ಕುಟುಂಬದ ನಿಕಟ ಸದಸ್ಯರಾಗಿರುತ್ತಾರೆ.

ಗರಿಷ್ಠ ಹಣ ಮತ್ತು ಲೋನ್ ಪಾವತಿ ಅವಧಿ

ಉತ್ಪನ್ನಗರಿಷ್ಠ ಫಂಡಿಂಗ್*
ಹೋಮ್ ಲೋನ್ / ಮನೆ ವಿಸ್ತರಣೆ ಲೋನ್ / ಹೋಮ್ ಸುಧಾರಣೆ ಲೋನ್ / ಟಾಪಪ್ ಲೋನ್ಆಸ್ತಿ ವೆಚ್ಚದಲ್ಲಿ 80%
ಅನಿವಾಸೀಯ ನೆಲದ ಲೋನ್ / ಪ್ಲಾಟ್ ಲೋನ್‌ಗಳುಆಸ್ತಿ ವೆಚ್ಚದಲ್ಲಿ 60%
ಆಸ್ತಿ ಮೇಲಿನ ಲೋನ್ಆಸ್ತಿ ವೆಚ್ಚದಲ್ಲಿ 50%

*ಎಚ್ ಡಿ ಎಫ್ ಸಿ ಮೌಲ್ಯಮಾಪನ ಮಾಡಿದಂತೆ, ಗ್ರಾಹಕರ ಆಸ್ತಿಯ ಮಾರುಕಟ್ಟೆ ಮೌಲ್ಯ ಮತ್ತು ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ.

ಹೋಮ್ ಲೋನ್‌ಗಳು / ಹೋಮ್ ಎಕ್ಸ್‌ಟೆನ್ಶನ್ ಲೋನ್‌ಗಳು / ರಿಫೈನಾನ್ಸ್‌ಗಳಿಗೆ ಲೋನ್ ಮರುಪಾವತಿಯ ಗರಿಷ್ಠ ಅವಧಿಯು 30 ವರ್ಷಗಳವರೆಗೆ ಇರುತ್ತದೆ. ಹೋಮ್ ಇಂಪ್ರೂಮೆಂಟ್ ಲೋನ್‌ಗಳು / ಪ್ಲಾಟ್ ಲೋನ್‌ಗಳು / ಆಸ್ತಿ ಮೇಲಿನ ಲೋನ್ / ನಾನ್ ರೆಸಿಡೆನ್ಶಿಯಲ್ ಪ್ರಿಮೈಸ್ ಲೋನ್‌ಗಳು / ಟಾಪ್ ಅಪ್ ಲೋನ್‌ಗಳಿಗಾಗಿ ಲೋನ್ ಮರುಪಾವತಿಯ ಗರಿಷ್ಠ ಅವಧಿಯು 15 ವರ್ಷಗಳವರೆಗೆ ಇರುತ್ತದೆ. 

ಲೋನ್ ಅವಧಿಯು ಗ್ರಾಹಕರ ರಿಸ್ಕ್ ಪ್ರೊಫೈಲ್, ಲೋನ್ ಮೆಚುರಿಟಿ ಸಮಯದಲ್ಲಿ ಗ್ರಾಹಕರ ವಯಸ್ಸು, ಲೋನ್ ಮೆಚುರಿಟಿ ಸಮಯದಲ್ಲಿ ಆಸ್ತಿಯ ವಯಸ್ಸು, ಆಯ್ಕೆ ಮಾಡಬಹುದಾದಂತಹ ನಿರ್ದಿಷ್ಟ ಮರುಪಾವತಿಯ ಯೋಜನೆಯನ್ನು ಅವಲಂಬಿಸಿ ಮತ್ತು ಪ್ರಚಲಿತ ಎಚ್ ಡಿ ಎಪ್ ಸಿ ಇತರ ಯಾವುದೇ ನಿಯಮಗಳನ್ನು ಅವಲಂಬಿಸಿರುತ್ತದೆ.

ಡಾಕ್ಯುಮೆಂಟ್ ಮತ್ತು ಶುಲ್ಕಗಳು

ಲೋನ್ ಅನುಮೋದನೆ ಪಡೆಯಲು ಪೂರ್ಣಗೊಂಡ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರಂ ಜತೆಗೆ ಎಲ್ಲಾ ಅರ್ಜಿದಾರ / ಸಹ-ಅರ್ಜಿದಾರರು ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ಯಾವುದಾದರೊಂದು ಆಯ್ಕೆ ಮಾಡಿ

Pan Card
KYC ಗೆ ಕಡ್ಡಾಯ ಡಾಕ್ಯುಮೆಂಟ್
ಈಗ ಅಪ್ಲೈ ಮಾಡಿ!

KYC ಡಾಕ್ಯುಮೆಂಟ್‍ಗಳ ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ .

  • ಮಾಲೀಕರಿಂದ ದೃಢೀಕರಿಸಲ್ಪಟ್ಟಿದೆ ಕಳೆದ 6 ತಿಂಗಳುಗಳ ಸಂಬಳದ ಸ್ಲಿಪ್ಗಳು / ಪ್ರಮಾಣಪತ್ರಗಳು
  • ಕಳೆದ 12 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ / ಸಂಬಳ ಕ್ರೆಡಿಟ್ ಆಗಿರುವುದನ್ನು ತೋರಿಸುವ ಅಪ್ಡೇಟ್ ಮಾಡಲಾದ ಪಾಸ್ ಬುಕ್
  • ಇತ್ತೀಚಿನ ಫಾರಂ-16
  • ಪ್ರಸ್ತುತ ಉದ್ಯೋಗ 1 ವರ್ಷಕ್ಕಿಂತ ಕಡಿಮೆಯಿರುವ ಸಂದರ್ಭದಲ್ಲಿ ಉದ್ಯೋಗದ ಒಪ್ಪಂದ / ನೇಮಕಾತಿ ಪತ್ರ
  • ನಡೆಯುತ್ತಿರುವ ಲೋನ್ಗಳ ಮರುಪಾವತಿಯನ್ನು ತೋರಿಸುವ ಕೊನೆಯ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಎಲ್ಲಾ ಅರ್ಜಿದಾರರ / ಸಹ-ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಿ ಅಡ್ಡ ಸಹಿ ಮಾಡಬೇಕು
  • 'ಎಚ್ ಡಿ ಎಫ್ ಸಿ ಲಿಮಿಟೆಡ್' ಹೆಸರಿನಲ್ಲಿ ಪ್ರೊಸೆಸಿಂಗ್ ಫೀ ಚೆಕ್

ಲೋನ್ ಅನುಮೋದನೆ ಪಡೆಯಲು ಪೂರ್ಣಗೊಂಡ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರಂ ಜತೆಗೆ ಎಲ್ಲಾ ಅರ್ಜಿದಾರ / ಸಹ-ಅರ್ಜಿದಾರರು ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ಯಾವುದಾದರೊಂದು ಆಯ್ಕೆ ಮಾಡಿ

ಈಗ ಅಪ್ಲೈ ಮಾಡಿ!

KYC ಡಾಕ್ಯುಮೆಂಟ್‍ಗಳ ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ .

  • ಕೊನೆಯ 2 ವರ್ಷಗಳು ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟ ಅಕೌಂಟ್ ಸಿ ಸ್ಟೇಟ್ಮೆಂಟ್ ಅನುಬಂಧ / ಷೆಡ್ಯೂಲ್ ಜೊತೆಗೆ (ವೈಯಕ್ತಿಕ ಮತ್ತು ಬಿಸಿನೆಸ್ ಘಟಕದ ಮತ್ತು CA ಇಂದ ಪ್ರಮಾಣೀಕರಿಸಲಾದ)
  • ಕೊನೆಯ 1 ವರ್ಷದ ಬಿಸಿನೆಸ್ ಘಟಕದ ಕರೆಂಟ್ ಅಕೌಂಟ್ ಮತ್ತು ವ್ಯಕ್ತಿಯ ಉಳಿತಾಯ ಅಕೌಂಟ್ ಸ್ಟೇಟ್ಮೆಂಟ್ (ವೈಯಕ್ತಿಕ ಮತ್ತು ಬಿಸಿನೆಸ್ ಘಟಕದ ಮತ್ತು CA ಯಿಂದ ಪ್ರಮಾಣೀಕರಿಸಲಾದ)
  • ಬಿಸಿನೆಸ್ ಪ್ರೊಫೈಲ್
  • ಇತ್ತೀಚಿನ ಫಾರಂ 26 AS
  • ಬಿಸಿನೆಸ್ ಘಟಕ ಒಂದು ಕಂಪನಿ ಆದರೆ ತಮ್ಮ ವೈಯಕ್ತಿಕ ಶೇರ್ ಹೊಂದಿರುವ CA / CS ಅವರಿಂದ ಪ್ರಮಾಣೀಕರಿಸಲಾದ ನಿರ್ದೇಶಕರ ಮತ್ತು ಷೇರುದಾರರ ಪಟ್ಟಿ
  • ಕಂಪನಿಯ ಮೆಮೊರಾಂಡಮ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಶನ್
  • ಬಿಸಿನೆಸ್ ಘಟಕ ಪಾಲುದಾರಿಕೆ ಸಂಸ್ಥೆ ಸಂದರ್ಭದಲ್ಲಿ ಪಾಲುದಾರಿಕೆ ಪತ್ರ
  • ಬಾಕಿ ಉಳಿದ ಮೊತ್ತ, ಕಂತುಗಳು, ಭದ್ರತೆ, ಉದ್ದೇಶ, ಬಾಕಿ ಉಳಿದ ಲೋನ್ ಅವಧಿ ಮುಂತಾದವುಗಳು ವೈಯಕ್ತಿಕ ಮತ್ತು ಬಿಸಿನೆಸ್ ಘಟಕದ ಅಸ್ತಿತ್ವದಲ್ಲಿ ಇರುವ ಲೋನ್ ವಿವರಗಳು.
  • ಎಲ್ಲಾ ಅರ್ಜಿದಾರರ / ಸಹ-ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಅಪ್ಲಿಕೇಶನ್ ಫಾರಂಗೆ ಅಂಟಿಸಿ ಅಡ್ಡ ಸಹಿ ಮಾಡಬೇಕು
  • 'ಎಚ್ ಡಿ ಎಫ್ ಸಿ ಲಿಮಿಟೆಡ್' ಹೆಸರಿನಲ್ಲಿ ಪ್ರೊಸೆಸಿಂಗ್ ಫೀ ಚೆಕ್

ಕೆಳಗೆ ಫೀಗಳು / ಇತರ ಶುಲ್ಕಗಳು / ಖರ್ಚುಗಳ ಸೂಚನಾ ಪಟ್ಟಿಯಾಗಿರುತ್ತದೆ, ಪಡೆದುಕೊಂಡಿರುವ ಲೋನ್ ಸ್ವರೂಪವನ್ನು ಅವಲಂಬಿಸಿ ಅವನ್ನು ಪಾವತಿಸಬೇಕು (*):

ಕೆಳಗೆ ಫೀಗಳು / ಇತರ ಶುಲ್ಕಗಳು / ಖರ್ಚುಗಳ ಸೂಚನಾ ಪಟ್ಟಿಯಾಗಿರುತ್ತದೆ, ಪಡೆದುಕೊಂಡಿರುವ ಲೋನ್ ಸ್ವರೂಪವನ್ನು ಅವಲಂಬಿಸಿ ಅವನ್ನು ಪಾವತಿಸಬೇಕು (*):

ಪ್ರೊಸೆಸಿಂಗ್ ಫೀಗಳು

ಸಂಬಳದಾರರಿಗಾಗಿ:
ಲೋನ್ ಮೊತ್ತದ 2% ವರೆಗೆ.

ಸ್ವ ಉದ್ಯೋಗಿಗಳಿಗಾಗಿ:
ಲೋನ್ ಮೊತ್ತದ 2% ವರೆಗೆ.

ತೃತೀಯ ಪಕ್ಷದ ಅಭಿಪ್ರಾಯದ ಕಾರಣದಿಂದ ಫೀಗಳು

ವಕೀಲರು / ತಾಂತ್ರಿಕ ಮೌಲ್ಯಮಾಪಕರಂತಹ ತೃತೀಯ ಪಕ್ಷದ ಅಭಿಪ್ರಾಯದ ಆಧಾರದ ಮೇಲೆ ಶುಲ್ಕಗಳು, ಒಂದು ಪ್ರಕರಣಕ್ಕೆ ಅನ್ವಯವಾಗುವಂತೆ ವಾಸ್ತವಿಕ ಆಧಾರದ ಮೇಲೆ ಪಾವತಿಸಲಾಗುವುದು. ಅಂತಹ ಶುಲ್ಕಗಳು ನೇರವಾಗಿ ಸಂಬಂಧಪಟ್ಟ ವಕೀಲ / ತಾಂತ್ರಿಕ ಮೌಲ್ಯಮಾಪಕರಿಗೆ ನೆರವಿನ ಪ್ರಕಾರಕ್ಕೆ ತಕ್ಕಂತೆ ಸಲ್ಲಿಸಬಹುದು.

ಆಸ್ತಿ ಇನ್ಶೂರೆನ್ಸ್

ಗ್ರಾಹಕರು ಪ್ರೀಮಿಯಂ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮತ್ತು ನಿರಂತರವಾಗಿ ಇನ್ಶೂರೆನ್ಸ್ ಸೇವಾದಾತರಿಗೆ ಪಾವತಿಸಿ, ಪಾಲಿಸಿ/ಪಾಲಿಸಿಗಳನ್ನು ಲೋನಿನ ಬಾಕಿ ಅವಧಿಯಲ್ಲಿ ಯಾವಾಗಲೂ ಜೀವಂತವಾಗಿಡಬಹುದು.

ತಡ ಪಾವತಿ ಶುಲ್ಕಗಳು

ತಡವಾಗಿ ಪಾವತಿಸಿದ ಬಡ್ಡಿ ಅಥವಾ EMI ಗ್ರಾಹಕರು ಹೆಚ್ಚುವರಿ ವಾರ್ಷಿಕ 24% ವರೆಗೆ ಪಾವತಿಸುವ ಜವಾಬ್ದಾರಿ ಅವರದು.

ಪ್ರಾಸಂಗಿಕ ಶುಲ್ಕಗಳು

ಡೀಫಾಲ್ಟ್ ಗ್ರಾಹಕರ ಬಾಕಿ ಮರುಪಾವತಿ ಸಂಬಂಧಿಸಿದಂತೆ ವೆಚ್ಚಗಳು, ಶುಲ್ಕಗಳು, ಖರ್ಚುಗಳು ಮತ್ತು ಇತರ ಹಣವನ್ನು ಭರಿಸಲು ಪ್ರಾಸಂಗಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. ವಿನಂತಿಯ ಮೇರೆಗೆ ಸಂಬಂಧಿಸಿದ ಬ್ರಾಂಚ್‌ನಿಂದ ಗ್ರಾಹಕರು ಪಾಲಿಸಿಯ ಪ್ರತಿಯನ್ನು ಪಡೆಯಬಹುದು.

ಕಾನೂನುಬದ್ಧ / ನಿಯಂತ್ರಕ ಶುಲ್ಕಗಳು

ಸ್ಟಾಂಪ್ ಡ್ಯೂಟಿ / MOD / MOE / ಸೆಂಟ್ರಲ್ ರಿಜಿಸ್ಟ್ರಿಯ ಅಫ್ ಸೆಕ್ಯುರಿಟೀಸಷನ್ ಅಸೆಟ್ ರಿಕನ್ಸ್ಟ್ರಕ್ಷನ್ ಅಂಡ್ ಸೆಕ್ಯೂರಿಟಿ ಇಂಟರೆಸ್ಟ್ ಅಫ್ ಇಂಡಿಯಾ (CERSAI) ಅಥವಾ ಇತರ ಶಾಸನಬದ್ಧ / ನಿಯಂತ್ರಕ ಸಂಸ್ಥೆಗಳ ಕಾರಣದಿಂದ ಅನ್ವಯಿಸುವ ಎಲ್ಲಾ ಶುಲ್ಕಗಳು ಮತ್ತು ಅನ್ವಯಿಸುವ ತೆರಿಗೆಗಳು ಗ್ರಾಹಕರು ಭರಿಸಬೇಕು ಮತ್ತು ಪಾವತಿಸಬೇಕು (ಅಥವಾ ಕೆಲವು ಸಂದರ್ಭದಲ್ಲಿ ಮರುಪಾವತಿಸಲಾಗುತ್ತದೆ). www.cersai.org.in ನಲ್ಲಿ ಅಂತಹ ಎಲ್ಲಾ ಶುಲ್ಕಗಳಿಗಾಗಿ ನೀವು CERSAI ವೆಬ್‌ಸೈಟ್‌ಗೆ ಭೇಟಿ ನೀಡಬಹುದು

ಇತರೆ ಶುಲ್ಕಗಳು

ಡಾಕ್ಯುಮೆಂಟ್ ಪ್ರಕಾರ ಶುಲ್ಕಗಳು
ಚೆಕ್ ಅಗೌರವ ಶುಲ್ಕಗಳು  ₹200**
ಡಾಕ್ಯುಮೆಂಟ್‌ಗಳ ಪಟ್ಟಿ ₹ 500 ವರೆಗೆ
ಡಾಕ್ಯುಮೆಂಟ್‌ಗಳ ಫೋಟೋ ಕಾಪಿ ₹ 500 ವರೆಗೆ
PDC ಸ್ವ್ಯಾಪ್ ₹ 200 ವರೆಗೆ
ವಿತರಣೆ ನಂತರ ವಿತರಣೆಯಾದ ಚೆಕ್ ರದ್ದತಿ ಶುಲ್ಕ ₹ 200 ವರೆಗೆ
ಅನುಮೋದನೆಯಾದ 6 ತಿಂಗಳುಗಳ ನಂತರ ಲೋನ್ ಪುನ: ಬೆಲೆ ಕಟ್ಟುವುದು  ₹3,000 ಜೊತೆಗೆ ಉದ್ಯೋಗಿ ಗ್ರಾಹಕರಿಗೆ ಅನ್ವಯವಾಗುವ ತೆರಿಗೆಗಳು; ಸ್ವಯಂ ಉದ್ಯೋಗಿ ಗ್ರಾಹಕರಿಗೆ ₹4,500 ಜೊತೆಗೆ ಅನ್ವಯವಾಗುವ ತೆರಿಗೆಗಳು
ಲೋನ್ ಅವಧಿಯನ್ನು ಹೆಚ್ಚು / ಕಡಿಮೆ ಮಾಡುವುದು ₹ 500 ಮತ್ತು ಅನ್ವಯವಾಗುವ ತೆರಿಗೆಗಳು
ಎ. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್‌ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್‌ಗಳು ("CRHL")

a) ವೈಯಕ್ತಿಕ ಸಾಲಗಾರರಿಗೆ:

ವೈಯಕ್ತಿಕ ಸಾಲಗಾರರಿಗೆ ಮಾತ್ರ ಮಂಜೂರು ಮಾಡಿದ ಎಲ್ಲ ಲೋನ್‌‌ಗಳಿಗಾಗಿ, ಯಾವುದೇ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ.

b) ವೈಯಕ್ತಿಕ ಸಾಲಗಾರರ ಹೊರತುಪಡಿಸಿ - ಕಂಪನಿ / ಏಕೈಕ ಮಾಲೀಕತ್ವದ ಸಂಸ್ಥೆ/ ಫರ್ಮ್ ಅಥವಾ HUF ನೊಂದಿಗೆ ಸಹ-ಅರ್ಜಿದಾರನಾಗಿ ಮಂಜೂರಾದ ಲೋನ್‌ಗಳಿಗಾಗಿ:

i. ಮೊದಲ ವಿತರಣೆಯ ದಿನಾಂಕದಿಂದ ಮೊದಲ ಆರು (6) ತಿಂಗಳ ಒಳಗೆ ಲೋನ್ ಪೂರ್ವಪಾವತಿ ಮಾಡಿದ್ದರೆ, ಪೂರ್ವಪಾವತಿ ಮಾಡಿದ ಮೊತ್ತಕ್ಕೆ ಪೂರ್ವಪಾವತಿ ಶುಲ್ಕಗಳು 2% ರಷ್ಟು ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು ವಿಧಿಸಲಾಗುವುದು;

ii. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ ಲೋನ್ ಪ್ರಾರಂಭದ ಪ್ರಿನ್ಸಿಪಲ್ ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರರ ಸ್ವಂತ ಮೂಲಗಳಿಂದ* ಮಾಡಬೇಕಾಗಿದೆ.

ಯಾವುದೇ ಫೈನಾನ್ಸಿಯಲ್ ವರ್ಷದಲ್ಲಿ 25% ಮಿತಿಗಿಂತ ಹೆಚ್ಚಿನ ಹಣವನ್ನು ಪೂರ್ವಪಾವತಿ ಮಾಡಿದ್ದರೆ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ 25% ಕ್ಕಿಂತಲೂ ಹೆಚ್ಚು ಪೂರ್ವಪಾವತಿ ಮಾಡುವ ಮೊತ್ತಕ್ಕೆ 2% ರಷ್ಟು ಪೂರ್ವಪಾವತಿ ಶುಲ್ಕಗಳು ವಿಧಿಸಲಾಗುವುದು.

36 ತಿಂಗಳುಗಳ ಅವಧಿ ಮುಗಿದ ನಂತರ, ಲೋನ್ ಸ್ವಂತ ಮೂಲಗಳಿಂದ ಪೂರ್ವಪಾವತಿ ಮಾಡಿದ್ದರೆ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. ರಿಫೈನಾನ್ಸ್ ಮೂಲಕ ಸಾಲವನ್ನು ಪೂರ್ವಪಾವತಿ ಮಾಡಬೇಕಾದರೆ ಸಾಲಗಾರ ಪೂರ್ವಪಾವತಿ ಶುಲ್ಕವನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

c) ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಎಚ್ ಡಿ ಎಫ್ ಸಿಯು ಸರಿಯಾದ ಮತ್ತು ಸೂಕ್ತವಾದ ಮೂಲಗಳು ಎಂದು ಖಚಿತಪಡಿಸಿಕೊಳ್ಳಲು ಗ್ರಾಹಕರು ತಕ್ಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

*ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಅಂದರೆ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವುದನ್ನು ಹೊರತುಪಡಿಸಿ ಯಾವುದೇ ಮೂಲ ಎಂದು ಅರ್ಥ.

ಮೇಲೆ ತಿಳಿಸಿದಂತೆ ಪೂರ್ವಪಾವತಿ ಶುಲ್ಕಗಳು ಈ ಲೋನ್ ಅಗ್ರಿಮೆಂಟ್ ಕಾರ್ಯಗತಗೊಳಿಸುವ ದಿನಾಂಕದಂದು ಇದ್ದರೂ, ಅವುಗಳು ಎಚ್ ಡಿ ಎಫ್ ಸಿ ಚಾಲನೆಯಲ್ಲಿರುವ ನೀತಿಗಳ ಪ್ರಕಾರ ಬದಲಾವಣೆಗೆ ಬದಲಾಗುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು. ಪೂರ್ವಪಾವತಿ ಮೇಲೆ ಅನ್ವಯವಾಗುವ ಇತ್ತೀಚಿನ ಶುಲ್ಕಗಳಿಗಾಗಿ ಗ್ರಾಹಕರಿಗೆ www.HDFC.com ಅನ್ನು ನೋಡಲು ವಿನಂತಿಸಲಾಗಿದೆ.

B. ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ

a) ವೈಯಕ್ತಿಕ ಸಾಲಗಾರರಿಗೆ:

ವಿತರಿಸಲಾದ ಎಲ್ಲಾ ಲೋನ್ಗಳಿಗಾಗಿ, ಪೂರ್ವಪಾವತಿ ಶುಲ್ಕವನ್ನು 2% ದರದಲ್ಲಿ ವಿಧಿಸಲಾಗುವುದು ಪ್ಲಸ್ ಅನ್ವಯವಾಗುವ ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು, ಯಾವುದೇ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ರಿಫೈನಾನ್ಸ್ ಮೂಲಕ ಪೂರ್ವಪಾವತಿ ಮಾಡಿದ ಬಾಕಿ ಉಳಿದ ಮೊತ್ತ (ಅಂತಹ ಮೊತ್ತದಲ್ಲಿ ನೀಡಲಾದ ಫೈನಾನ್ಸಿಯಲ್ ವರ್ಷದಲ್ಲಿ ಪೂರ್ವಪಾವತಿ ಮಾಡಿದ ಎಲ್ಲಾ ಮೊತ್ತವನ್ನು ಒಳಗೊಂಡಿರಬೇಕು) ಮತ್ತು ಸ್ವಂತ ಮೂಲಗಳಿಂದ ಅಲ್ಲ * ಹಾಗೂ ಎಲ್ಲಾ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿ ಅನ್ವಯವಾಗುತ್ತವೆ.

b) ವೈಯಕ್ತಿಕ ಸಾಲಗಾರರ ಹೊರತುಪಡಿಸಿ - ಕಂಪನಿ / ಏಕೈಕ ಮಾಲೀಕತ್ವದ ಸಂಸ್ಥೆ/ ಫರ್ಮ್ ಅಥವಾ HUF ನೊಂದಿಗೆ ಸಹ-ಅರ್ಜಿದಾರನಾಗಿ ಮಂಜೂರಾದ ಲೋನ್‌ಗಳಿಗಾಗಿ:

i. ಮೊದಲ ವಿತರಣೆಯ ದಿನಾಂಕದಿಂದ ಮೊದಲ ಆರು (6) ತಿಂಗಳ ಒಳಗೆ ಲೋನ್ ಪೂರ್ವಪಾವತಿ ಮಾಡಿದ್ದರೆ, ಪೂರ್ವಪಾವತಿ ಮಾಡಿದ ಮೊತ್ತಕ್ಕೆ ಪೂರ್ವಪಾವತಿ ಶುಲ್ಕಗಳು 2% ರಷ್ಟು ತೆರಿಗೆಗಳು ಮತ್ತು ಕಾನೂನುಬದ್ಧವಾಗಿ ಹೇರಿದ ತೆರಿಗೆಗಳು ಮತ್ತು ಶುಲ್ಕಗಳು ವಿಧಿಸಲಾಗುವುದು;

II. ಮೊದಲ ಆರು (6) ತಿಂಗಳ ಅವಧಿ ಮುಗಿದ ನಂತರ ಮತ್ತು 36 ತಿಂಗಳ ತನಕ, ಸಾಲಗಾರ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ ಲೋನಿನ ಪ್ರಾರಂಭದ ಪ್ರಿನ್ಸಿಪಲ್ ಮೊತ್ತದ 25% ವರೆಗೆ ಪೂರ್ವಪಾವತಿ ಶುಲ್ಕಗಳು ಇಲ್ಲದೆ ಪೂರ್ವಪಾವತಿ ಮಾಡಬಹುದು. ಅಂತಹ ಪೂರ್ವಪಾವತಿ ಸಾಲಗಾರ ಸ್ವಂತ ಮೂಲಗಳಿಂದ* ಮಾಡಬೇಕಾಗಿದೆ.

ಯಾವುದೇ ಫೈನಾನ್ಸಿಯಲ್ ವರ್ಷದಲ್ಲಿ 25% ಮಿತಿಗಿಂತ ಹೆಚ್ಚಿನ ಹಣವನ್ನು ಪೂರ್ವಪಾವತಿ ಮಾಡಿದ್ದರೆ ಪ್ರತಿ ಫೈನಾನ್ಸಿಯಲ್ ವರ್ಷದಲ್ಲಿ 25% ಕ್ಕಿಂತಲೂ ಹೆಚ್ಚು ಪೂರ್ವಪಾವತಿ ಮಾಡುವ ಮೊತ್ತಕ್ಕೆ 2% ರಷ್ಟು ಪೂರ್ವಪಾವತಿ ಶುಲ್ಕಗಳು ವಿಧಿಸಲಾಗುವುದು.

36 ತಿಂಗಳುಗಳ ಅವಧಿ ಮುಗಿದ ನಂತರ, ಲೋನ್ ಸ್ವಂತ ಮೂಲಗಳಿಂದ ಪೂರ್ವಪಾವತಿ ಮಾಡಿದ್ದರೆ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. ರಿಫೈನಾನ್ಸ್ ಮೂಲಕ ಸಾಲವನ್ನು ಪೂರ್ವಪಾವತಿ ಮಾಡಬೇಕಾದರೆ ಸಾಲಗಾರ ಪೂರ್ವಪಾವತಿ ಶುಲ್ಕವನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

c) ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಎಚ್ ಡಿ ಎಫ್ ಸಿಯು ಸರಿಯಾದ ಮತ್ತು ಸೂಕ್ತವಾದ ಮೂಲಗಳು ಎಂದು ಖಚಿತಪಡಿಸಿಕೊಳ್ಳಲು ಗ್ರಾಹಕರು ತಕ್ಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

*ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಅಂದರೆ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವುದನ್ನು ಹೊರತುಪಡಿಸಿ ಯಾವುದೇ ಮೂಲ ಎಂದು ಅರ್ಥ.

ಮೇಲೆ ತಿಳಿಸಿದಂತೆ ಪೂರ್ವಪಾವತಿ ಶುಲ್ಕಗಳು ಈ ಲೋನ್ ಅಗ್ರಿಮೆಂಟ್ ಕಾರ್ಯಗತಗೊಳಿಸುವ ದಿನಾಂಕದಂದು ಇದ್ದರೂ, ಅವುಗಳು ಎಚ್ ಡಿ ಎಫ್ ಸಿ ಚಾಲನೆಯಲ್ಲಿರುವ ನೀತಿಗಳ ಪ್ರಕಾರ ಬದಲಾವಣೆಗೆ ಬದಲಾಗುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು. ಪೂರ್ವಪಾವತಿ ಮೇಲೆ ಅನ್ವಯವಾಗುವ ಇತ್ತೀಚಿನ ಶುಲ್ಕಗಳಿಗಾಗಿ ಗ್ರಾಹಕರಿಗೆ www.HDFC.com ಅನ್ನು ನೋಡಲು ವಿನಂತಿಸಲಾಗಿದೆ.

ನಮ್ಮ ಪರಿವರ್ತನೆ ಸೌಲಭ್ಯದ ಮೂಲಕ ಹೋಮ್ ಲೋನಿನಲ್ಲಿ (ವಿಸ್ತರಣೆ ಬದಲಾಯಿಸುವ ಮೂಲಕ ಅಥವಾ ಯೋಜನೆಗಳನ್ನು ಬದಲಾಯಿಸುವ ಮೂಲಕ) ಅನ್ವಯವಾಗುವ ಬಡ್ಡಿದರಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಾವು ಒದಗಿಸುತ್ತೇವೆ. ನಿಮ್ಮ ಮಾಸಿಕ ಕಂತು (EMI) ಅಥವಾ ಲೋನಿನ ಕಾಲಾವಧಿಯನ್ನು ಕಡಿಮೆ ಮಾಡಲು ಆಯ್ಕೆ ಮಾಡುವ ಮೂಲಕ ಮತ್ತು ನಾಮಮಾತ್ರ ಶುಲ್ಕವನ್ನು ಮಾತ್ರ ಪಾವತಿಸುವ ಮೂಲಕ ನೀವು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ. ನಮ್ಮ ಪರಿವರ್ತನೆ ಸೌಲಭ್ಯವನ್ನು ಪಡೆದುಕೊಳ್ಳಲು ಮತ್ತು ಲಭ್ಯವಿರುವ ಹಲವಾರು ಆಯ್ಕೆಗಳನ್ನು ಚರ್ಚಿಸಲು ಇಲ್ಲಿ ಕ್ಲಿಕ್ ಮಾಡಿ ಅಥವಾ ನಿಮಗೆ ಮರಳಿ ಕರೆ ಮಾಡಲು ಅಥವಾ ನಿಮ್ಮ ಹೋಮ್ ಲೋನ್‌ ಅಕೌಂಟ್ ಮಾಹಿತಿಯನ್ನು 24x7 ಪಡೆಯಲು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಮ್ಮ ಆನ್ಲೈನ್ ಅಕ್ಸೆಸ್ ಗೆ ಲಾಗ್ ಆನ್ ಆಗಿ. ಈ ಕೆಳಗಿನ ಪರಿವರ್ತನಾ ಆಯ್ಕೆಗಳು ಎಚ್ ಡಿ ಎಫ್ ಸಿಯ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಲಭ್ಯವಿರುತ್ತವೆ:

ಪ್ರಾಡಕ್ಟ್ /ಸರ್ವಿಸ್ ಹೆಸರು ವಿಧಿಸಲಾದ ಫೀ / ಶುಲ್ಕದ ಹೆಸರು ಯಾವಾಗ ಪಾವತಿಸಬೇಕು ಫ್ರಿಕ್ವೆನ್ಸಿ ಮೊತ್ತ ರೂಪಾಯಿಗಳಲ್ಲಿ

ಬದಲಾಗುವ ಲೋನ್ ದರದಲ್ಲಿ ಕಡಿಮೆ ದರಕ್ಕೆ ಬದಲಿಸಿ (ಹೌಸಿಂಗ್ / ವಿಸ್ತರಣೆ / ಸುಧಾರಣೆ)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು.

ಸ್ಥಿರ ಲೋನ್ ದರ ಇಂದ ಅಸ್ಥಿರ ದರ ಲೋನ್ ಬದಲಾಯಿಸುವುದು (ವಸತಿ / ವಿಸ್ತರಣೆ / ಸುಧಾರಣೆ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು.

ಟ್ರೂ-ಫಿಕ್ಸೆಡ್ ಸ್ಥಿರ ದರ ಇಂದ ಅಸ್ಥಿರ ದರಕ್ಕೆ ಬದಲಾಯಿಸಿ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತ(ಯಾವುದಾದರೂ ಇದ್ದರೆ) 1.75% ವರೆಗೆ.

ಕಡಿಮೆ ದರಕ್ಕೆ ಬದಲಿಸಿ (ವಸತಿ ಅಲ್ಲದ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದಿರುವ ಮೊತ್ತದ ಮೇಲೆ ಅರ್ಧ ವ್ಯತ್ಯಾಸ (ಯಾವುದಾದರೂ ಇದ್ದರೆ) 0.5% ಕನಿಷ್ಠ ಫೀ ಮತ್ತು ಗರಿಷ್ಠ 1.50%.

ಕಡಿಮೆ ದರಕ್ಕೆ ಬದಲಿಸಿ (ಪ್ಲಾಟ್ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದ ಮೊತ್ತದ 0.5% ರಷ್ಟು (ಯಾವುದಾದರೂ ಇದ್ದರೆ) ಪ್ಲಸ್ ತೆರಿಗೆಗಳು.

ಕ್ಯಾಲ್ಕುಲೇಟರ್‌ಗಳು

ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ

ಎಚ್ ಡಿ ಎಫ್ ಸಿ ಹೋಮ್ ಲೋನ್ ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನ್ Emi ಅನ್ನು ಸುಲಭವಾಗಿ ಲೆಕ್ಕ ಹಾಕಲು ಸಹಾಯ ಮಾಡುತ್ತದೆ. ಹೋಮ್ ಲೋನಿಗಾಗಿ ಎಚ್ ಡಿ ಎಫ್ ಸಿ EMI ಕ್ಯಾಲ್ಕುಲೇಟರ್ ನಿಮಗೆ ಹೊಸ ಮನೆ ಖರೀದಿಸುವ ಮಾಹಿತಿಯ ತೀರ್ಮಾನವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. EMI ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನ್ ಸೇವೆ ನಿರ್ವಹಣೆಗೆ ನಿಮ್ಮ ಹಣದ ಹರಿವನ್ನು ಯೋಜಿಸಲು ಉಪಯುಕ್ತವಾಗಿದೆ. ಎಚ್ ಡಿ ಎಫ್ ಸಿ ಪ್ರತಿ ಲಕ್ಷಕ್ಕೆ ₹646 ರಿಂದ ಆರಂಭವಾಗುವ EMI ಗಳು ಮತ್ತು ವಾರ್ಷಿಕ 6.70%* ನ ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು ಮತ್ತು ಟಾಪ್-ಅಪ್ ಲೋನ್‌ನಂತಹ ಹೆಚ್ಚುವರಿ ಫೀಚರ್‌ಗಳೊಂದಿಗೆ ಹೋಮ್ ಲೋನ್‌ಗಳನ್ನು ಒದಗಿಸುತ್ತದೆ. ಕಡಿಮೆ ಬಡ್ಡಿ ದರ ಮತ್ತು ದೀರ್ಘ ಮರುಪಾವತಿ ಅವಧಿಯೊಂದಿಗೆ, ಎಚ್ ಡಿ ಎಫ್ ಸಿ ಹೋಮ್ ಲೋನ್ ನಿಮಗೆ ಅನುಕೂಲಕರವಾದ EMI ಗಳನ್ನು ನೀಡುತ್ತದೆ. ನಮ್ಮ ಸಮಂಜಸವಾದ EMI ಗಳೊಂದಿಗೆ, ಎಚ್ ಡಿ ಎಫ್ ಸಿ ಹೋಮ್ ಲೋನ್ ನಿಮ್ಮ ಪಾಕೆಟ್ ಅನ್ನು ಹೊರೆಯನ್ನಾಗಿಸುವುದಿಲ್ಲ. ನಮ್ಮ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ನೊಂದಿಗೆ ನೀವು ಪಾವತಿಸಬೇಕಾದ EMI ಅನ್ನು ಲೆಕ್ಕ ಹಾಕಿ.

ಹೋಂ ಲೋನ್‌ EMI ಲೆಕ್ಕ ಹಾಕಿ

₹.
1 ಲಕ್ಷ ₹. 10 ಕೋಟಿ
1 30
0 15
25,00,000
20,44,367
45,44,367

ಹೋಮ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್

ವರ್ಷಆರಂಭಿಕ ಬ್ಯಾಲೆನ್ಸ್EMI*12ವಾರ್ಷಿಕ ಬಡ್ಡಿ ಪಾವತಿವಾರ್ಷಿಕ ಅಸಲು ಪಾವತಿಅಂತಿಮ ಬ್ಯಾಲೆನ್ಸ್
125,00,0002,27,2181,65,63261,58724,38,413
224,38,4132,27,2181,61,37665,84223,72,571
323,72,5712,27,2181,56,82770,39223,02,180
423,02,1802,27,2181,51,96375,25522,26,924
522,26,9242,27,2181,46,76380,45521,46,469
621,46,4692,27,2181,41,20486,01420,60,455
720,60,4552,27,2181,35,26191,95819,68,497
819,68,4972,27,2181,28,90798,31218,70,186
918,70,1862,27,2181,22,1141,05,10417,65,081
1017,65,0812,27,2181,14,8511,12,36716,52,714
1116,52,7142,27,2181,07,0871,20,13115,32,583
1215,32,5832,27,21898,7871,28,43214,04,152
1314,04,1522,27,21889,9131,37,30612,66,846
1412,66,8462,27,21880,4251,46,79311,20,053
1511,20,0532,27,21870,2821,56,9369,63,118
169,63,1182,27,21859,4391,67,7797,95,338
177,95,3382,27,21847,8461,79,3726,15,966
186,15,9662,27,21835,4521,91,7664,24,199
194,24,1992,27,21822,2022,05,0172,19,183
202,19,1832,27,2188,0362,19,1830

ಹೋಮ್ ಲೋನ್ ಅರ್ಹತೆ ನಿಮ್ಮ ಮಾಸಿಕ ಆದಾಯ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್, ಸ್ಥಿರ ಮಾಸಿಕ ಹಣಕಾಸಿನ ಜವಾಬ್ದಾರಿಗಳು, ಕ್ರೆಡಿಟ್ ಹಿಸ್ಟ್ರಿ, ನಿವೃತ್ತಿ ವಯಸ್ಸು ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿದೆ. ಎಚ್ ಡಿ ಎಫ್ ಸಿ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಲೋನಿನ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯಿರಿ

ಹೋಮ್ ಲೋನ್ ಅರ್ಹತೆಯನ್ನು ಲೆಕ್ಕ ಹಾಕಿ

₹.
10 ಕೆ ₹. 1 ಕೋಟಿ
1 30
0 15
₹.
₹. 0 ₹. 1 ಕೋಟಿ

ನಿಮ್ಮ ಹೋಮ್ ಲೋನ್ ಅರ್ಹತೆ

₹.

ಹೆಚ್ಚಿನ ಹಣಕಾಸು / ಸ್ವಲ್ಪ ಸಹಾಯ ಬೇಕೇ??

ನಮ್ಮೊಂದಿಗೆ ಚಾಟ್ ಮಾಡಿ

ನಿಮ್ಮ ಹೋಮ್ ಲೋನ್ EMI ಹೀಗಿರುತ್ತದೆ

₹. /ಮಾಸಿಕ

ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ

₹.
₹. 0 ₹. 1 ಕೋಟಿ
₹.
10 ಕೆ ₹. 1 ಕೋಟಿ
1 30
0 15
₹.
₹. 0 ₹. 1 ಕೋಟಿ

ನಿಮ್ಮ ಅರ್ಹತೆಯ ಗರಿಷ್ಠ ಲೋನ್ ಮೊತ್ತ

₹.

ಹೆಚ್ಚಿನ ಹಣಕಾಸು / ಸ್ವಲ್ಪ ಸಹಾಯ ಬೇಕೇ??

ನಮ್ಮೊಂದಿಗೆ ಚಾಟ್ ಮಾಡಿ

ಆಸ್ತಿಯ ಬೆಲೆ

₹.

EMI ನಲ್ಲಿ ಉಳಿತಾಯಗಳನ್ನು ಕಂಡುಕೊಳ್ಳಿ

ಅಸ್ತಿತ್ವದಲ್ಲಿರುವ ಲೋನ್

₹.
1 ಲಕ್ಷ ₹. 10 ಕೋಟಿ
1 30
0 15

ಅಸ್ತಿತ್ವದಲ್ಲಿರುವ ಲೋನ್

1 30
0 15

ನಗದು ಹೊರಹರಿವು ಒಟ್ಟು ಉಳಿತಾಯ

₹.

ಅಸ್ತಿತ್ವದಲ್ಲಿರುವ EMI

₹.

ಪ್ರಸ್ತಾಪಿಸಿದ EMI

₹.

EMI ನಲ್ಲಿ ಉಳಿತಾಯ

₹.

ಆಗಾಗ್ಗೆ ಕೇಳುವ ಪ್ರಶ್ನೆಗಳು

ನಾನು ಅರ್ಹವಾಗುವ ಹೋಮ್ ಲೋನ್ ಮೊತ್ತವನ್ನು ಎಚ್ ಡಿ ಎಫ್ ಸಿ ಹೇಗೆ ನಿರ್ಧರಿಸುತ್ತದೆ?

ನಾವು ನಿಮ್ಮ ಹೋಮ್ ಲೋನ್ ಅರ್ಹತೆ ಯನ್ನು ಹೆಚ್ಚಾಗಿ ನಿಮ್ಮ ಆದಾಯ ಮತ್ತು ಮರುಪಾವತಿ ಸಾಮರ್ಥ್ಯದ ಮೇಲೆ ನಿರ್ಧರಿಸುತ್ತೇವೆ. ಇತರ ಪ್ರಮುಖ ಅಂಶಗಳಲ್ಲಿ ನಿಮ್ಮ ವಯಸ್ಸು, ವಿದ್ಯಾರ್ಹತೆ, ಅವಲಂಬಿತವಾಗಿರುವ ಜನರು, ನಿಮ್ಮ ಸಂಗಾತಿಯ ಆದಾಯ (ಇದ್ದಲ್ಲಿ), ಆಸ್ತಿಗಳು ಮತ್ತು ಹೊಣೆಗಾರಿಕೆಗಳು, ಉಳಿತಾಯದ ಇತಿಹಾಸ ಮತ್ತು ಉದ್ಯೋಗದ ಸ್ಥಿರತೆ ಮತ್ತು ಮುಂದುವರಿಕೆಯನ್ನು ಒಳಗೊಂಡಿರುತ್ತವೆ.

EMI ಎಂದರೇನು ??

EMI 'ಸಮಾನ ಮಾಸಿಕ ಕಂತು' ಅನ್ನು ಸೂಚಿಸುತ್ತದೆ, ಇದು ಲೋನ್ ಪೂರ್ಣವಾಗಿ ಮರುಪಾವತಿ ಮಾಡುವವರೆಗೆ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ನೀವು ಪಾವತಿಸುವ ಮೊತ್ತವಾಗಿದೆ. EMI ಅಸಲು ಮೊತ್ತ ಮತ್ತು ಬಡ್ಡಿ ಅಂಶ ಒಳಗೊಂಡಿರುತ್ತದೆ, ಅದರ ರಚನೆಯ ರೀತಿಯು ನಿಮ್ಮ ಲೋನ್ ಆರಂಭಿಕ ವರ್ಷಗಳಲ್ಲಿ ಬಡ್ಡಿ ಅಂಶವು ಅಸಲು ಮೊತ್ತಕ್ಕಿಂತ ದೊಡ್ಡದಾಗಿದೆ, ಆದರೆ ಲೋನಿನ ನಂತರದ ಅರ್ಧ ಭಾಗದಲ್ಲಿ, ಅಸಲಿನ ಅಂಶವು ಹೆಚ್ಚು ದೊಡ್ಡದಾಗಿದೆ.

ನಾನು ಯಾವಾಗ ಹೋಮ್ ಲೋನ್ ಅಪ್ಲಿಕೇಶನ್ ಅನ್ನು ಮಾಡಬಹುದು?

ನೀವು ಆಸ್ತಿಯನ್ನು ಆಯ್ಕೆ ಮಾಡಿರದಿದ್ದರೂ ನಿರ್ಮಾಣ ಪ್ರಾರಂಭವಾಗಿಲ್ಲವಾದರೂ, ನೀವು ಆಸ್ತಿಯನ್ನು ಖರೀದಿಸಲು ಅಥವಾ ಆಸ್ತಿಯನ್ನು ನಿರ್ಮಿಸಲು ನಿರ್ಧರಿಸಿದ ತಕ್ಷಣವೇ ನೀವು ಹೋಮ್ ಲೋನ್ ಅಪ್ಲೈ ಮಾಡಬಹುದು.

'ಸ್ವಂತ ಕೊಡುಗೆ' ಎಂದರೇನು??

‘ಆಸ್ತಿಯ ಒಟ್ಟು ಬೆಲೆಯಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್ ಕಳೆದು ಉಳಿಯುವುದೇ 'ಸ್ವಂತ ಕೊಡುಗೆ'.

ನಾನು ಹೋಮ್ ಲೋನ್ ಅನ್ನು ಹೇಗೆ ಮರುಪಾವತಿ ಮಾಡಬಹುದು?

ನಿಮ್ಮ ಅನುಕೂಲತೆಗಾಗಿ, ಎಚ್ ಡಿ ಎಫ್ ಸಿ ಹೋಮ್ ಲೋನಿನ ಮರುಪಾವತಿಗಾಗಿ ವಿವಿಧ ವಿಧಾನಗಳನ್ನು ಆಫರ್ ಮಾಡುತ್ತದೆ. ಇನ್‌‌ಸ್ಟಾಲ್‌‌ಮೆಂಟ್ ಅನ್ನು ECS (ಎಲೆಕ್ಟ್ರಾನಿಕ್ ಕ್ಲೀನಿಂಗ್ ಸಿಸ್ಟಂ) ಮೂಲಕ ಪಾವತಿಸಲು ನೀವು ನಿಮ್ಮ ಬ್ಯಾಂಕರ್‌‌ಗೆ ಸ್ಟ್ಯಾಂಡಿಂಗ್ ಇನ್‌‌ಸ್ಟ್ರಕ್ಷನ್ ಅನ್ನು ನೀಡಬಹುದು, ನಿಮ್ಮ ಉದ್ಯೋಗದಾತರ ಮೂಲಕ ತಿಂಗಳ ಕಂತನ್ನು ನೇರವಾಗಿ ಕಡಿತ ಮಾಡಲು ಮನವಿ ಮಾಡಬಹುದು ಅಥವಾ ನಿಮ್ಮ ಸ್ಯಾಲರಿ ಅಕೌಂಟಿನಿಂದ ಪೋಸ್ಟ್ ಡೇಟೆಡ್ ಚೆಕ್ ಅನ್ನು ನೀಡಬಹುದು.

ನಿಯಮ & ಷರತ್ತುಗಳು

ಲೋನ್ ಸೆಕ್ಯೂರಿಟಿ ಸಾಮಾನ್ಯವಾಗಿ ಹಣಕಾಸು ಪಡೆಯುತ್ತಿರುವ ಆಸ್ತಿಯ ಮೇಲೆ ಎಚ್ ಡಿ ಎಫ್ ಸಿಯ ಅವಶ್ಯಕತೆಗೆ ತಕ್ಕಂತೆ ಸೆಕ್ಯೂರಿಟಿ ಬಡ್ಡಿ ಮತ್ತು / ಅಥವಾ ಬೇರಾವುದೇ ಅಡಮಾನ / ಮಧ್ಯಂತರ ಸೆಕ್ಯೂರಿಟಿ ಆಗಿರುತ್ತದೆ.

ಇಲ್ಲಿರುವ ಎಲ್ಲಾ ಮಾಹಿತಿ ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಇದೆ ಮತ್ತು ಇದು ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ಸೂಚನೆ ನೀಡುವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಎಚ್ ಡಿ ಎಫ್ ಸಿ ಪ್ರಾಡಕ್ಟ್ ಮತ್ತು ಸರ್ವಿಸ್ ಬಗ್ಗೆ ವಿವರವಾದ ಮಾಹಿತಿಗಾಗಿ ಹತ್ತಿರದ ಎಚ್ ಡಿ ಎಫ್ ಸಿ ಬ್ರಾಂಚ್ ಅನ್ನು ಭೇಟಿ ನೀಡಿ.

ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಲೋನಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು.

ಚಾಟ್ ಮಾಡಿ!