ನಿಮ್ಮ ಲೋನ್ ಅವಶ್ಯಕತೆಗಳ ಬಗ್ಗೆ ನಮಗೆ ತಿಳಿಸಿ

ನನ್ನ ವಸತಿಯ ಮಾಹಿತಿ
ನಾನು

ಹೋಮ್ ಲೋನ್‌ಗಳ ಬಡ್ಡಿದರಗಳು

ಎಚ್ ಡಿ ಎಫ್ ಸಿ ಲಿಮಿಟೆಡ್ ವಾರ್ಷಿಕ 6.70*% ರಿಂದ ಆರಂಭವಾಗುವ ಹೋಮ್ ಲೋನ್ ಬಡ್ಡಿ ದರಗಳನ್ನು ನೀಡುತ್ತದೆ. ಈ ಬಡ್ಡಿ ದರವು ಹೋಮ್ ಲೋನ್‌ಗಳು, ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನ್‌ಗಳು, ಮನೆ ನವೀಕರಣ ಮತ್ತು ಮನೆ ವಿಸ್ತರಣೆ ಲೋನ್‌ಗಳಿಗೆ ಅನ್ವಯವಾಗುತ್ತದೆ.

ಎಚ್ ಡಿ ಎಫ್ ಸಿ ಫ್ಲೋಟಿಂಗ್ ದರದ ಲೋನ್ ಎಂದು ಕೂಡ ಕರೆಯಲ್ಪಡುವ ಹೊಂದಾಣಿಕೆ ಮಾಡಬಹುದಾದ ದರದ ಲೋನ್ ಹಾಗೂ ಟ್ರುಫಿಕ್ಸಡ್ ಲೋನ್ ಅನ್ನು ಒದಗಿಸುತ್ತದೆ, ಅಂದರೆ ಇದರಲ್ಲಿ ಬಡ್ಡಿ ದರವು ನಿರ್ದಿಷ್ಟ ಕಾಲಾವಧಿಗೆ ಸ್ಥಿರವಾಗಿರುತ್ತದೆ (ಸಂಪೂರ್ಣ ಲೋನ್ ಕಾಲಾವಧಿಯ ಮೊದಲ ಎರಡು ವರ್ಷಗಳವರೆಗೆ), ಇದರ ನಂತರ ಅದು ಹೊಂದಾಣಿಕೆ ಮಾಡಬಹುದಾದ ದರದ ಲೋನ್ ಆಗಿ ಪರಿವರ್ತನೆಗೊಳ್ಳುತ್ತದೆ.

ಬಡ್ಡಿ ದರಗಳು

ವಿಶೇಷ ಹೋಮ್ ಲೋನ್ ದರಗಳು

ಬ್ಲಾಕ್‌ಬಸ್ಟರ್ ಫೆಸ್ಟಿವ್ ಆಫರ್

ಹೊಂದಾಣಿಕೆಯ ದರದ ಹೋಮ್ ಲೋನ್

ಲೋನ್ ಸ್ಲ್ಯಾಬ್ / ಕ್ರೆಡಿಟ್ ಸ್ಕೋರ್ ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
800 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್‌ಗಳಿಗಾಗಿ 6.70

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ) 6.75 ನಿಂದ 7.25
ಇತರರಿಗೆ * (30 ಲಕ್ಷದವರೆಗೆ) 6.80 ನಿಂದ 7.30
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು) 7.00 ನಿಂದ 7.50
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು) 7.05 ನಿಂದ 7.55
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು) 7.10 ನಿಂದ 7.60
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು) 7.15 ನಿಂದ 7.65

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು

ಹೊಂದಾಣಿಕೆಯ ದರದ ಹೋಮ್ ಲೋನ್

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ) 6.95 ನಿಂದ 7.45
ಇತರರಿಗೆ * (30 ಲಕ್ಷದವರೆಗೆ) 7.00 ನಿಂದ 7.50
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು) 7.20 ನಿಂದ 7.70
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು) 7.25 ನಿಂದ 7.75
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು) 7.30 ನಿಂದ 7.80
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು) 7.35 ನಿಂದ 7.85

*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (ಎಚ್ ಡಿ ಎಫ್ ಸಿ) ಯ ಹೊಂದಾಣಿಕೆಯ ದರದ ಹೋಮ್ ಲೋನ್ ಯೋಜನೆಯಡಿ ಅನ್ವಯವಾಗುತ್ತದೆ ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳನ್ನು ಎಚ್ ಡಿ ಎಫ್ ಸಿ ಯ ಬೆಂಚ್ ಮಾರ್ಕ್ ರೇಟ್ ("RPLR") ಗೆ ಲಿಂಕ್ ಮಾಡಲಾಗಿದೆ ಮತ್ತು ಲೋನ್ ಅವಧಿಯ ಮೂಲಕ ಬದಲಾಗುತ್ತದೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಲಿಮಿಟೆಡ್‌ನ ಏಕೈಕ ವಿವೇಚನೆಗೆ ಒಳಪಟ್ಟಿವೆ. ಲೋನ್ ಸ್ಲ್ಯಾಬ್‌ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ರು ಫಿಕ್ಸೆಡ್ ಸಾಲ - 2 ವರ್ಷದ ಸ್ಥಿರ ದರದ ರೂಪಾಂತರ

ರಿಟೇಲ್ ಪ್ರೈಮ್ ಲೆಂಡಿಂಗ್ ದರ: 16.05%

ಲೋನ್ ಸ್ಲ್ಯಾಬ್ ಹೋಮ್ ಲೋನ್ ಬಡ್ಡಿದರಗಳು (% ಪ್ರತಿ ವರ್ಷಕ್ಕೆ)
ಮಹಿಳೆಯರಿಗೆ * (30 ಲಕ್ಷದವರೆಗೆ) 7.40 ನಿಂದ 7.90
ಇತರರಿಗೆ * (30 ಲಕ್ಷದವರೆಗೆ) 7.45 ನಿಂದ 7.95
ಮಹಿಳೆಯರಿಗೆ * (30.01 ಲಕ್ಷದಿಂದ 75 ಲಕ್ಷಗಳು) 7.55 ನಿಂದ 8.05
ಇತರರಿಗೆ * (30.01 ಲಕ್ಷದಿಂದ 75 ಲಕ್ಷಗಳು) 7.60 ನಿಂದ 8.10
ಮಹಿಳೆಯರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟದ್ದು) 7.65 ನಿಂದ 8.15
ಇತರರಿಗೆ * (75.01 ಲಕ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟವು) 7.70 ನಿಂದ 8.20

ನಿಯಮ ಮತ್ತು ಷರತ್ತುಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಹೋಮ್ ಲೋನ್ ಬಡ್ಡಿ ದರಗಳು - FAQ ಗಳು

ಹೋಮ್ ಲೋನ್ ಬಡ್ಡಿ ದರ ಎಂದರೇನು?

ಹೋಮ್ ಲೋನ್ ಬಡ್ಡಿ ದರವು ಅಸಲು ಮೊತ್ತವನ್ನು ಬಳಸಲು ಸಾಲಗಾರರಿಗೆ ಹೋಮ್ ಲೋನ್ ಒದಗಿಸುವವರು ಅಸಲಿನ ಮೇಲೆ ವಿಧಿಸುವ ಮೊತ್ತವಾಗಿದೆ. ನಿಮ್ಮ ಹೌಸಿಂಗ್ ಲೋನ್ ಬಡ್ಡಿ ದರವು ನಿಮ್ಮ ಹೋಮ್ ಲೋನ್ ಮೇಲೆ ನೀವು ಮಾಸಿಕ ಪಾವತಿಸಬೇಕಾದ EMI ಅನ್ನು ನಿರ್ಧರಿಸುತ್ತದೆ.

ಪ್ರಸ್ತುತ ಹೋಮ್ ಲೋನ್ ಬಡ್ಡಿ ದರಗಳು ಯಾವುವು?

ಎಚ್ ಡಿ ಎಫ್ ಸಿ ಪ್ರತಿ ವರ್ಷಕ್ಕೆ 6.70%* ರಿಂದ ಆರಂಭವಾಗುವ ಹೋಮ್ ಲೋನ್ ಬಡ್ಡಿ ದರಗಳನ್ನು ಒದಗಿಸುತ್ತಿದೆ. ಗ್ರಾಹಕರು ಈ ಹೋಮ್ ಲೋನ್ ಬಡ್ಡಿ ದರಗಳ ಜೊತೆಗೆ 30 ವರ್ಷಗಳವರೆಗಿನ ದೀರ್ಘಾವಧಿಯ ಲೋನ್ ಅವಧಿ, ಎಂಡ್ ಟು ಎಂಡ್ ಡಿಜಿಟಲ್ ಪರಿಹಾರಗಳು, ಕಸ್ಟಮೈಸ್ ಮಾಡಿದ ಮರುಪಾವತಿ ಆಯ್ಕೆಗಳು ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು! ನಿಮ್ಮ EMI ಲೆಕ್ಕ ಹಾಕಲು https://www.hdfc.com/home-loan-emi-calculator ಗೆ ಭೇಟಿ ನೀಡಿ, ಈಗಲೇ ಹೋಮ್ ಲೋನ್‌ಗೆ ಅಪ್ಲೈ ಮಾಡಲು https://www.hdfc.com/call-for-new-home-loan ಗೆ ಭೇಟಿ ನೀಡಿ

ಹೋಮ್ ಲೋನ್‌ನ ವಿವಿಧ ರೀತಿಯ ಬಡ್ಡಿ ದರಗಳು ಯಾವುವು?

ಎಚ್ ಡಿ ಎಫ್ ಸಿ ಹೋಮ್ ಲೋನ್ ಗ್ರಾಹಕರು ಹೋಮ್ ಲೋನ್ ಪಡೆಯುವಾಗ ಎರಡು ವಿಧದ ಬಡ್ಡಿ ದರಗಳ ನಡುವೆ ಆಯ್ಕೆ ಮಾಡಬಹುದು. ಇವುಗಳು ಈ ಕೆಳಗಿನಂತಿವೆ:
ಹೊಂದಾಣಿಕೆ ಮಾಡಬಹುದಾದ ದರದ ಹೋಮ್ ಲೋನ್ (ARHL): ಹೊಂದಾಣಿಕೆ ಮಾಡಬಹುದಾದ ದರದ ಹೋಮ್ ಲೋನ್ ಅನ್ನು ಫ್ಲೋಟಿಂಗ್ ಅಥವಾ ವೇರಿಯಬಲ್ ದರದ ಲೋನ್ ಎಂದು ಕೂಡ ಕರೆಯಲಾಗುತ್ತದೆ. ARHL ನಲ್ಲಿನ ಬಡ್ಡಿ ದರವು ಎಚ್ ಡಿ ಎಫ್ ಸಿ ಯ ಬೆಂಚ್‌ಮಾರ್ಕ್ ದರಕ್ಕೆ, ಅಂದರೆ ರಿಟೇಲ್ ಪ್ರೈಮ್ ಲೆಂಡಿಂಗ್ ದರಕ್ಕೆ (RPLR) ಲಿಂಕ್ ಆಗಿದೆ. ಎಚ್ ಡಿ ಎಫ್ ಸಿ ಯ RPLR ನಲ್ಲಿನ ಯಾವುದೇ ಚಲನೆಯು ಅನ್ವಯವಾಗುವ ಬಡ್ಡಿ ದರಗಳ ಬದಲಾವಣೆಯ ಮೇಲೆ ಪರಿಣಾಮ ಬೀರಬಹುದು.
ಟ್ರುಫಿಕ್ಸೆಡ್ ಲೋನ್: ಟ್ರುಫಿಕ್ಸೆಡ್ ಲೋನ್‌ನಲ್ಲಿ, ಹೋಮ್ ಲೋನ್ ಬಡ್ಡಿ ದರವು ನಿರ್ದಿಷ್ಟ ಅವಧಿಗೆ (ಉದಾ., ಲೋನ್ ಕಾಲಾವಧಿಯ ಮೊದಲ 2 ಅಥವಾ 3 ವರ್ಷಗಳಿಗೆ) ಫಿಕ್ಸೆಡ್ ಆಗಿರುತ್ತದೆ, ಇದರ ನಂತರ ಅನ್ವಯವಾಗುವ ಬಡ್ಡಿ ದರಗಳೊಂದಿಗೆ ಅದು ಆಟೋಮ್ಯಾಟಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ದರದ ಹೋಮ್ ಲೋನ್ ಆಗಿ ಪರಿವರ್ತನೆಗೊಳ್ಳುತ್ತದೆ. ಎಚ್ ಡಿ ಎಫ್ ಸಿ ಸದ್ಯಕ್ಕೆ ಲೋನ್ ಅವಧಿಯ ಮೊದಲ ಎರಡು ವರ್ಷಗಳವರೆಗೆ ಬಡ್ಡಿ ದರ ಫಿಕ್ಸೆಡ್ ಆಗಿರುವ ಟ್ರುಫಿಕ್ಸೆಡ್ ಲೋನ್ ಅನ್ನು ಒದಗಿಸುತ್ತದೆ.

ಹೋಮ್ ಲೋನ್ ಮೇಲಿನ ಕನಿಷ್ಠ ಬಡ್ಡಿ ದರ ಎಷ್ಟು?

ಪ್ರಸ್ತುತ ಎಚ್ ಡಿ ಎಫ್ ಸಿ ನೀಡುವ ಅತಿ ಕಡಿಮೆ ಹೋಮ್ ಲೋನ್ ಬಡ್ಡಿ ದರ ವಾರ್ಷಿಕ 6.70%* ಆಗಿದೆ.

ಹೋಮ್ ಲೋನ್ ಬಡ್ಡಿ ದರದ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?

ಹೋಮ್ ಲೋನ್ ಮೇಲಿನ ಬಡ್ಡಿ ದರದ ಮೇಲೆ ಈ 7 ಮುಖ್ಯ ಅಂಶಗಳು ಪರಿಣಾಮ ಬೀರಬಹುದಾಗಿವೆ-

  1.  ಬಡ್ಡಿ ದರದ ವಿಧ
  2.  ಬೆಂಚ್‌ಮಾರ್ಕ್ ಸಾಲದ ದರ
  3.  ಲೋನ್ ಟು ವ್ಯಾಲ್ಯೂ ರೇಶಿಯೋ
  4.  ಸಾಲಗಾರರ ಫೈನಾನ್ಸಿಯಲ್ ಪ್ರೊಫೈಲ್
  5.  ಮರುಪಾವತಿಯ ಅವಧಿ
  6.  ಆಸ್ತಿಯ ಸ್ಥಳ
  7.  ಹೋಮ್ ಲೋನ್ ಒದಗಿಸುವವರ ಖ್ಯಾತಿ