ಭಾರತದಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್ ಪಡೆಯಲು ಹಂತವಾರು ಪ್ರಕ್ರಿಯೆ
ಎಚ್ ಡಿ ಎಫ್ ಸಿ ಯ ಹೋಮ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯು ಸುಲಭ ಮತ್ತು ಅನುಕೂಲಕರವಾಗಿದೆ. ಹೋಮ್ ಲೋನ್ ಅಪ್ಲಿಕೇಶನ್ ಮತ್ತು ವಿತರಣೆ ಪ್ರಕ್ರಿಯೆಗೆ ಹಂತವಾರು ಮಾರ್ಗದರ್ಶಿ ಇಲ್ಲಿದೆ.
ಹಂತ 1: ಹೋಮ್ ಲೋನಿನ ಅಪ್ಲಿಕೇಶನ್
ಗುರುತಿನ ಪುರಾವೆ, ವಿಳಾಸದ ಪುರಾವೆ, ಆದಾಯ ಪುರಾವೆ ಮುಂತಾದ ಪ್ರಮುಖ ಡಾಕ್ಯುಮೆಂಟ್ಗಳೊಂದಿಗೆ ನೀವು ಸರಿಯಾಗಿ ಭರ್ತಿ ಮಾಡಿದ ಅಪ್ಲಿಕೇಶನ್ ಅನ್ನು ಸಲ್ಲಿಸಬೇಕು. ನೀವು ಸಹ-ಅರ್ಜಿದಾರರೊಂದಿಗೆ ಅರ್ಜಿ ಸಲ್ಲಿಸುತ್ತಿದ್ದರೆ, ನೀವು ಸಹ-ಅರ್ಜಿದಾರರ ಅದೇ ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕು, ಮತ್ತು ಅವರು ಅಪ್ಲಿಕೇಶನ್ ಫಾರ್ಮಿಗೆ ಸಹಿ ಮಾಡಬೇಕು.
ನೀವು ಈಗಾಗಲೇ ಆಸ್ತಿಯನ್ನು ಶಾರ್ಟ್-ಲಿಸ್ಟ್ ಮಾಡಿದ್ದರೆ, ನೀವು ಫಾರ್ಮಿನಲ್ಲಿ ವಿವರಗಳನ್ನು ಒದಗಿಸಬೇಕು ಮತ್ತು ಕಾನೂನು ಮತ್ತು ತಾಂತ್ರಿಕ ಮೌಲ್ಯಮಾಪನಕ್ಕಾಗಿ ಆಸ್ತಿ ಸಂಬಂಧಿತ ಡಾಕ್ಯುಮೆಂಟ್ಗಳ ಫೋಟೋಕಾಪಿಗಳನ್ನು ಸಲ್ಲಿಸಬೇಕು.
www.hdfc.com ಗೆ ಭೇಟಿ ನೀಡುವ ಮೂಲಕ ನೀವು ಎಚ್ ಡಿ ಎಫ್ ಸಿ ಹೋಮ್ ಲೋನ್ಗಳಿಗೆ ಕೂಡ ಆನ್ಲೈನ್ನಲ್ಲಿ ಅಪ್ಲೈ ಮಾಡಬಹುದು. ನೀವು ನಮ್ಮ ಟೋಲ್-ಫ್ರೀ ನಂಬರಿಗೆ ಕೂಡ ಕರೆ ಮಾಡಬಹುದು ಮತ್ತು ನಮ್ಮ ಸಮಾಲೋಚಕರು ನಿಮ್ಮ ಮನೆಗೆ ಭೇಟಿ ನೀಡುತ್ತಾರೆ ಮತ್ತು ಪ್ರಕ್ರಿಯೆಯ ಮೂಲಕ ನಿಮಗೆ ಸಹಾಯ ಮಾಡುತ್ತಾರೆ.
ಹಂತ 2: ಲೋನ್ ಅನುಮೋದನೆ
ನೀವು ಫಾರ್ಮ್ ಮತ್ತು ಡಾಕ್ಯುಮೆಂಟ್ಗಳನ್ನು ಸಲ್ಲಿಸಿದ ನಂತರ, ಮೌಲ್ಯಮಾಪನದ ಪ್ರೊಸೆಸ್ ಆರಂಭವಾಗುತ್ತದೆ. ನಿಮ್ಮ ಆದಾಯ, ಹೊಣೆಗಾರಿಕೆಗಳು, ಕ್ರೆಡಿಟ್ ಸ್ಕೋರ್ ಇತ್ಯಾದಿಗಳಿಗೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ನಿಮ್ಮ ಅರ್ಹತೆಯನ್ನು ನಾವು ಮೌಲ್ಯಮಾಪನ ಮಾಡುತ್ತೇವೆ.
ನೀವು ಸ್ವಯಂ-ಉದ್ಯೋಗಿಯಾಗಿದ್ದರೆ, ಮೇಲಿನ ಮಾಹಿತಿಯ ಜೊತೆಗೆ, ನಾವು ಬಿಸಿನೆಸ್ ಸುಸ್ಥಿರತೆ ಮತ್ತು ನಗದು ಹರಿವಿನ ಸ್ಥಿರತೆಯನ್ನು ಕೂಡ ಮೌಲ್ಯಮಾಪನ ಮಾಡುತ್ತೇವೆ.
ಈ ಹಂತದಲ್ಲಿ, ನೀವು ಅಪ್ಲಿಕೇಶನ್ ಫಾರ್ಮ್ನಲ್ಲಿ ಒದಗಿಸುವ ಮಾಹಿತಿಯನ್ನು ಮೌಲ್ಯೀಕರಿಸಲು ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡಬಹುದು, ಅಥವಾ ನಿಮ್ಮ ಮನೆ/ಆಫೀಸ್ಗೆ ಭೇಟಿ ನೀಡಬಹುದು.
ನಮ್ಮ ಮೌಲ್ಯಮಾಪನದ ಆಧಾರದ ಮೇಲೆ, ನಿಮ್ಮ ಲೋನ್ ಅರ್ಹತೆಯನ್ನು ನಾವು ನಿರ್ಧರಿಸುತ್ತೇವೆ.
ಹಂತ 3: ಕಾನೂನು ಮತ್ತು ತಾಂತ್ರಿಕ ಪರಿಶೀಲನೆ
ನೀವು ಆಸ್ತಿ ಸಂಬಂಧಿತ ಡಾಕ್ಯುಮೆಂಟ್ಗಳ ಸಂಬಂಧಿತ ಪ್ರತಿಗಳನ್ನು ಸಲ್ಲಿಸಬೇಕು. ಇವುಗಳಲ್ಲಿ ಶೀರ್ಷಿಕೆ ಡಾಕ್ಯುಮೆಂಟ್ಗಳ ಸಂಪೂರ್ಣ ಸರಪಳಿ (ಮರುಮಾರಾಟದ ಆಸ್ತಿಯ ಸಂದರ್ಭದಲ್ಲಿ), ಬಿಲ್ಡರ್ನೊಂದಿಗಿನ ಸೇಲ್ ಅಗ್ರಿಮೆಂಟ್, NOC (ನೋ-ಅಬ್ಜೆಕ್ಷನ್ ಸರ್ಟಿಫಿಕೇಟ್), OC (ಆಕ್ಯುಪೆನ್ಸಿ ಸರ್ಟಿಫಿಕೇಟ್) ಮತ್ತು ನಾವು ಪರಿಶೀಲಿಸಲು ಅಗತ್ಯವಿರುವ ಯಾವುದೇ ಇತರ ದಾಖಲೆಗಳು ಸೇರಿವೆ. ಮಂಜೂರಾದ ಯೋಜನೆಗಳು ಮತ್ತು ಇತರ ಅನ್ವಯವಾಗುವ ಮಾನದಂಡಗಳ ಪ್ರಕಾರ ಆಸ್ತಿಯನ್ನು ನಿರ್ಮಿಸಲಾಗಿದೆಯೇ ಎಂದು ಪರಿಶೀಲಿಸಲು ಮತ್ತು ಮಾರುಕಟ್ಟೆ ಮೌಲ್ಯವನ್ನು ನಿರ್ಣಯಿಸಲು ನಾವು ಆಸ್ತಿಯ ತಾಂತ್ರಿಕ ತಪಾಸಣೆಯನ್ನು ನಡೆಸುತ್ತೇವೆ.
ಹಂತ 4: ಹೋಮ್ ಲೋನ್ ಮಂಜೂರಾತಿ
ನಿಮ್ಮ ಲೋನ್ ಅರ್ಹತೆಯನ್ನು ನಿರ್ಧರಿಸಿದ ನಂತರ ಮತ್ತು ಆಸ್ತಿಯ ಕಾನೂನು ಮತ್ತು ತಾಂತ್ರಿಕ ಅಂಶಗಳನ್ನು ಪರಿಶೀಲಿಸಿದ ನಂತರ, ನಾವು ಮಂಜೂರಾತಿ ಪತ್ರದ ಮೂಲಕ ಲೋನ್ ಮೊತ್ತವನ್ನು ತಿಳಿಸುತ್ತೇವೆ. ಮಂಜೂರಾತಿ ಪತ್ರವು ಈ ಕೆಳಗಿನ ವಿವರಗಳನ್ನು ಒಳಗೊಂಡಿರುತ್ತದೆ:
- ಒಟ್ಟು ಮಂಜೂರಾದ ಲೋನ್ ಮೊತ್ತ.
- ಹೋಮ್ ಲೋನ್ ಬಡ್ಡಿ ದರ
- ಅನ್ವಯವಾಗುವ ಬಡ್ಡಿ ದರದ ವಿಧ (ಫಿಕ್ಸೆಡ್ ಅಥವಾ ಫ್ಲೋಟಿಂಗ್ ಬಡ್ಡಿ ದರ)
- ಲೋನ್ ಅವಧಿ
- ಪಾವತಿಸಬೇಕಾದ EMI (ಅನ್ವಯವಾಗುವಂತೆ)
- ಮಂಜೂರಾತಿ ಪತ್ರದ ಮಾನ್ಯತೆ
- ವಿತರಣೆಯ ಮೊದಲು ವಿಶೇಷ ಷರತ್ತುಗಳನ್ನು (ಯಾವುದಾದರೂ ಇದ್ದರೆ) ಪೂರೈಸಬೇಕು
- ಇತರ ನಿಯಮ ಮತ್ತು ಷರತ್ತುಗಳು.
ಹಂತ 5: ಹೋಮ್ ಲೋನ್ ವಿತರಣೆ
ಕ್ರೆಡಿಟ್ ಪಡೆದ ನಂತರ, ಕಾನೂನು ಮತ್ತು ತಾಂತ್ರಿಕ ಪರಿಶೀಲನೆಯನ್ನು ಮಾಡಿದ ಮೇಲೆ, ನೀವು ಮೂಲ ಶೀರ್ಷಿಕೆ ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕಾಗುತ್ತದೆ. ಒಮ್ಮೆ ನೀವು ತಿಳಿಸಲಾದ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ ಮತ್ತು ವಿತರಣಾ ವಿನಂತಿಯನ್ನು ಸಲ್ಲಿಸಿದ ನಂತರ, ನಿಮ್ಮ ವಿತರಣಾ ಚೆಕ್ ಅನ್ನು ಸಿದ್ಧಪಡಿಸುವ ಪ್ರೊಸೆಸ್ ಅನ್ನು ನಾವು ಪ್ರಾರಂಭಿಸುತ್ತೇವೆ.. ಸಾಲದಾತರು ವಿತರಣೆ ಚೆಕ್ ಅನ್ನು ನೀಡುವ ಮೊದಲು ನೀವು ಲೋನ್ ಅಗ್ರೀಮೆಂಟ್ಗೆ ಸಹಿ ಮಾಡಬೇಕಾಗುತ್ತದೆ. ಲೋನ್ ಅಗ್ರೀಮೆಂಟ್ಗೆ ಸಹಿ ಮಾಡುವ ಮೊದಲು ನೀವು ಬಡ್ಡಿ ದರ, ಬಡ್ಡಿ ಪ್ರಕಾರ, ಲೋನ್ ಅವಧಿ, EMI ಮತ್ತು ಇತರ ನಿಯಮ ಮತ್ತು ಷರತ್ತುಗಳಂತಹ ಅತ್ಯಂತ ಪ್ರಮುಖ ವಿವರಗಳನ್ನು ಎಚ್ಚರಿಕೆಯಿಂದ ಓದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನೀವು ಖರೀದಿಸಲು ಬಯಸುವ ಆಸ್ತಿಯು ನಿರ್ಮಾಣದಲ್ಲಿದ್ದರೆ, ನಿರ್ಮಾಣದ ಪ್ರಗತಿಯ ಆಧಾರದ ಮೇಲೆ ನಾವು ಮಂಜೂರಾದ ಮೊತ್ತವನ್ನು ಡೆವಲಪರ್ಗೆ ಕಂತುಗಳಲ್ಲಿ ವಿತರಿಸುತ್ತೇವೆ.