ಹೋಮ್ ಲೋನ್ ಮಂಜೂರಾತಿ ಎಂದರೇನು?

ಹೋಮ್ ಲೋನ್ ಮಂಜೂರಾತಿ ಪತ್ರ ಎಂಬುದು ಗ್ರಾಹಕರಿಗೆ ಸಾಲ ನೀಡುವ ಸಂಸ್ಥೆಯಿಂದ ನೀಡಲಾದ ಅಧಿಕೃತ ಡಾಕ್ಯುಮೆಂಟ್ ಆಗಿದ್ದು, ಅವರ ಲೋನನ್ನು ಅನುಮೋದಿಸಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಸಾಲದಾತರು ಕ್ರೆಡಿಟ್ ಹಿಸ್ಟರಿ, ಆದಾಯ, ಮರುಪಾವತಿ ಸಾಮರ್ಥ್ಯ ಮುಂತಾದ ಹೋಮ್ ಲೋನ್ ಅರ್ಜಿದಾರರ ವಿವರಗಳನ್ನು ಪರಿಶೀಲಿಸಿದ ನಂತರ ಮಂಜೂರಾತಿ ಪತ್ರವನ್ನು ನೀಡುತ್ತಾರೆ. 

ಹೋಮ್ ಲೋನ್ ಮಂಜೂರಾತಿ ಪಡೆಯುವ ಪ್ರೊಸೆಸ್ ಅನ್ನು ಅರ್ಥಮಾಡಿಕೊಳ್ಳುವುದು

ನೀವು ಹೋಮ್ ಲೋನ್‌ಗಾಗಿ ಅಪ್ಲೈ ಮಾಡಿದಾಗ, ನೀವು ಸಾಲದಾತರು ನಿಗದಿಪಡಿಸಿದ ಕಾರ್ಯವಿಧಾನಗಳನ್ನು ಅನುಸರಿಸಬೇಕು ಮತ್ತು ಸಮ್ಮತಿಸಬೇಕು. ಅದೇ ರೀತಿ, ಸಾಲದಾತರು ಹೋಮ್ ಲೋನ್ ಮಂಜೂರಾತಿಗಾಗಿ ಕೆಲವು ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಾರೆ.

 • ಹೋಮ್ ಲೋನ್‌ ಅಪ್ಲಿಕೇಶನ್

  ಮೊದಲನೆಯದಾಗಿ, ನೀವು ಹೋಮ್ ಲೋನ್ ಅಪ್ಲಿಕೇಶನ್ ಅನ್ನು ವಿವರವಾಗಿ ಭರ್ತಿ ಮಾಡಬೇಕು ಮತ್ತು ಅಗತ್ಯ ಡಾಕ್ಯುಮೆಂಟ್‌ಗಳೊಂದಿಗೆ ಅದನ್ನು ಸಲ್ಲಿಸಬೇಕು. ಎಚ್ ಡಿ ಎಫ್ ಸಿ ಯ ಸಂಪೂರ್ಣ ಡಿಜಿಟಲ್ ಪ್ರೊಸೆಸ್ ನಿಮ್ಮ ಮನೆಯಿಂದಲೇ ಸುರಕ್ಷತೆ ಮತ್ತು ಆರಾಮವಾಗಿ ಲೋನ್‌ಗೆ ಅಪ್ಲೈ ಮಾಡಲು ನಿಮಗೆ ಅನುಮತಿ ನೀಡುತ್ತದೆ.
 • ಹೋಮ್ ಲೋನ್ ಪ್ರೊಸೆಸಿಂಗ್

  ಹೋಮ್ ಲೋನ್ ಅಪ್ಲಿಕೇಶನ್‌ನಲ್ಲಿ ನಿಮಗೆ ಯಾವುದೇ ಸಹಾಯದ ಅಗತ್ಯವಿದ್ದರೆ ಅಥವಾ ಯಾವುದೇ ಪ್ರಶ್ನೆಗಳಿದ್ದರೆ, ನೀವು ಸುಲಭವಾಗಿ ಆನ್ಲೈನ್ ಚಾಟ್ ಸಹಾಯ ಅಥವಾ ಟೋಲ್-ಫ್ರೀ ನಂಬರ್‌ ಮೂಲಕ ಎಚ್ ಡಿ ಎಫ್ ಸಿ ಪ್ರತಿನಿಧಿಗಳನ್ನು ಸಂಪರ್ಕಿಸಬಹುದು.
 • ಸಾಲದಾತರಿಂದ ವೆರಿಫಿಕೇಶನ್

  ನಿಮ್ಮ ಅಪ್ಲಿಕೇಶನ್ ಸ್ವೀಕರಿಸಿದ ನಂತರ, ಸಾಲದಾತರು ಅಂತಹ ಆದಾಯ, ಉದ್ಯೋಗ ಮತ್ತು ಕ್ರೆಡಿಟ್ ಇತಿಹಾಸದ ವಿವರಗಳನ್ನು ವೆರಿಫೈ ಮಾಡುತ್ತಾರೆ ಮತ್ತು ಅನುಮೋದನೆ/ಮಂಜೂರಾತಿ ಪ್ರೊಸೆಸ್ ಅನ್ನು ಆರಂಭಿಸುತ್ತಾರೆ.
 • ಹೋಮ್ ಲೋನ್ ಮಂಜೂರಾತಿ

  ಪರಿಶೀಲನೆಯ ನಂತರ, ಸಾಲದಾತರು ಹೋಮ್ ಲೋನ್ ಮಂಜೂರಾತಿ ಪತ್ರವನ್ನು ನೀಡುತ್ತಾರೆ, ಇದು ಲೋನ್ ಮೊತ್ತ, ಲೋನ್ ಅವಧಿ, ಬಡ್ಡಿ ದರದ ಪ್ರಕಾರ ಮುಂತಾದ ಬೇಸಿಕ್ ಲೋನ್ ವಿವರಗಳನ್ನು ಮತ್ತು ನಿಯಮ ಮತ್ತು ಷರತ್ತುಗಳನ್ನು ಒಳಗೊಂಡಿರುತ್ತದೆ.

ಮಂಜೂರಾತಿ ಪತ್ರವು ಅಂತಿಮ ಲೋನ್ ಒಪ್ಪಂದವಲ್ಲ. ಇದು ಕೇವಲ ಆರಂಭಿಕ ಅನುಮೋದನೆಯನ್ನು ಸೂಚಿಸುತ್ತದೆ. ಲೋನ್ ವಿತರಣೆಯನ್ನು ಮುಂದುವರೆಸಲು ನೀವು ನಿಮ್ಮ ಅಂಗೀಕಾರವನ್ನು ಒದಗಿಸಬೇಕು ಮತ್ತು ಮಂಜೂರಾತಿ ಪತ್ರದಲ್ಲಿ ನಮೂದಿಸಿದ ಷರತ್ತುಗಳನ್ನು ಅನುಸರಿಸಬೇಕು. 

ಹೋಮ್ ಲೋನ್ ಮಂಜೂರಾತಿ ಪತ್ರದಲ್ಲಿ ಏನಿರುತ್ತದೆ?

ಹೋಮ್ ಲೋನ್ ಮಂಜೂರಾತಿ ಪತ್ರವು ಈ ಕೆಳಗಿನ ವಿವರಗಳನ್ನು ಒಳಗೊಂಡಿರುವ ಪ್ರಮುಖ ಡಾಕ್ಯುಮೆಂಟ್ ಆಗಿದೆ:

 • ಒಟ್ಟು ಮಂಜೂರಾದ ಲೋನ್ ಮೊತ್ತ.
 • ಹೋಮ್ ಲೋನ್‌ ಬಡ್ಡಿ ದರ
 • ಅನ್ವಯವಾಗುವ ಬಡ್ಡಿ ದರದ ವಿಧ (ಫಿಕ್ಸೆಡ್ ಅಥವಾ ಫ್ಲೋಟಿಂಗ್ ಬಡ್ಡಿ ದರ)
 • ಲೋನ್ ಅವಧಿ
 • ಪಾವತಿಸಬೇಕಾದ EMI (ಅನ್ವಯವಾಗುವಂತೆ)
 • ಮಂಜೂರಾತಿ ಪತ್ರದ ಮಾನ್ಯತೆ
 • ವಿತರಣೆಯ ಮೊದಲು ವಿಶೇಷ ಷರತ್ತುಗಳನ್ನು (ಯಾವುದಾದರೂ ಇದ್ದರೆ) ಪೂರೈಸಬೇಕು
 • ಇತರ ನಿಯಮ ಮತ್ತು ಷರತ್ತುಗಳು.

ನಾನು ನನ್ನ ಮಂಜೂರಾತಿ ಪತ್ರವನ್ನು ಪಡೆದಿದ್ದೇನೆ. ಮುಂದೆ ಏನು?

ನೀವು ನಿಮ್ಮ ಹೋಮ್ ಲೋನ್ ಮಂಜೂರಾತಿ ಪತ್ರವನ್ನು ಪಡೆದಾಗ, ನೀವು ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಓದಬೇಕು. ಒಂದು ವೇಳೆ ನೀವು ಆಫರ್‌ನಿಂದ ತೃಪ್ತರಾಗಿದ್ದರೆ, ಆಫರ್ ಅಂಗೀಕಾರವನ್ನು ತಿಳಿಸುವ ಮೂಲಕ ನೀವು ಅದರ ಸಹಿ ಮಾಡಿದ ಪ್ರತಿಯನ್ನು ನಿಮ್ಮ ಸಾಲದಾತರೊಂದಿಗೆ ಶೇರ್ ಮಾಡಬೇಕು. 

ನಿರ್ದಿಷ್ಟ ಅವಧಿಯೊಳಗೆ ಸಾಲದಾತರಿಗೆ ನಿಮ್ಮ ಅಂಗೀಕಾರದ ನಿರ್ಧಾರವನ್ನು ನೀವು ತಿಳಿಸಬೇಕು, ಇದರಿಂದಾಗಿ ಅವರು ವಿತರಣೆ ಪ್ರೊಸೆಸ್ ಅನ್ನು ಆರಂಭಿಸಬಹುದು.