ಕ್ರೆಡಿಟ್‌ ಸ್ಕೋರ್‌ ಎಂದರೆ ಏನು? 

ಕ್ರೆಡಿಟ್ ಸ್ಕೋರ್ ಎಂಬುದು 300 ರಿಂದ 900 ವರೆಗಿನ ನಡುವಿನ ಮೂರು ಅಂಕಿಯ ಸಂಖ್ಯೆಯಾಗಿದ್ದು, ಇದು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಸೂಚಿಸುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇದು ಸಮಯಕ್ಕೆ ಸರಿಯಾಗಿ ಲೋನ್ ಮರುಪಾವತಿಸುವ ನಿಮ್ಮ ಸಾಮರ್ಥ್ಯದ ಸೂಚಕವಾಗಿದೆ. ಕ್ರೆಡಿಟ್ ಬ್ಯೂರೋಗಳು ಕ್ರೆಡಿಟ್ ಬಳಕೆಯ ಅನುಪಾತ ಮತ್ತು ಕ್ರೆಡಿಟ್ ಮರುಪಾವತಿ ಹಿಸ್ಟರಿಯಂಥ ಪ್ರಮುಖ ಅಂಶಗಳನ್ನು ಮೌಲ್ಯಮಾಪನ ಮಾಡುತ್ತವೆ ಮತ್ತು ಪ್ರತಿ ವ್ಯಕ್ತಿಗೆ ಕ್ರೆಡಿಟ್ ಸ್ಕೋರ್ ನಿಯೋಜಿಸುತ್ತವೆ. 

ಭಾರತದಲ್ಲಿ ಎಷ್ಟನ್ನು ಹೋಮ್ ಲೋನ್‌ಗಳಿಗೆ ಉತ್ತಮ ಕ್ರೆಡಿಟ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ?

ಹೋಮ್ ಲೋನ್ ಅಪ್ಲಿಕೇಶನ್‌ಗಳನ್ನು ಅನುಮೋದಿಸಲು ವಿವಿಧ ಸಾಲದಾತರು ವಿವಿಧ ಬೆಂಚ್‌ಮಾರ್ಕ್ ಕ್ರೆಡಿಟ್ ಸ್ಕೋರ್ ಅವಶ್ಯಕತೆಗಳನ್ನು ಹೊಂದಿದ್ದರೂ, 700-750 ನಡುವಿನ ಸ್ಕೋರ್‌ಗಳನ್ನು ತುಂಬಾ ಉತ್ತಮವೆಂದು ಪರಿಗಣಿಸಲಾಗುತ್ತದೆ. 

900 ಕ್ಕೆ ಹತ್ತಿರವಾಗಿರುವ ಹೆಚ್ಚಿನ ಸ್ಕೋರ್ ಎಂಬುದು, ನಿಮ್ಮ ಲೋನ್ ಅನುಮೋದನೆ ಪಡೆಯುವ ಉತ್ತಮ ಅವಕಾಶವನ್ನು ಸೂಚಿಸುತ್ತದೆ. ವೇಗವಾದ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ, ಕಡಿಮೆ ಬಡ್ಡಿ ದರಗಳು ಮತ್ತು ರಿಯಾಯಿತಿ ಪ್ರಕ್ರಿಯಾ ಶುಲ್ಕ ಮತ್ತು ದೊಡ್ಡ ಲೋನ್ ಮೊತ್ತದಂತಹ ಇತರ ಪ್ರಯೋಜನಗಳನ್ನು ನೀವು ಆನಂದಿಸಬಹುದು.

ಭಾರತದಲ್ಲಿ ವಿವಿಧ ಕ್ರೆಡಿಟ್ ಬ್ಯೂರೋಗಳು ಯಾವುವು?

ಕ್ರೆಡಿಟ್ ಬ್ಯೂರೋ ಎಂಬುದು ವ್ಯಕ್ತಿಯ ಮತ್ತು ಬಿಸಿನೆಸ್ ಘಟಕದ ಫೈನಾನ್ಸಿಯಲ್ ಡೇಟಾ ಮತ್ತು ಲೋನ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ಓವರ್‌ಡ್ರಾಫ್ಟ್ ಇತ್ಯಾದಿಗಳನ್ನು ಒಳಗೊಂಡಂತೆ ಮರುಪಾವತಿ ಮಾಹಿತಿಯನ್ನು ಸಂಗ್ರಹಿಸುವ ಮತ್ತು ವಿಶ್ಲೇಷಿಸುವ ಒಂದು ಸಂಸ್ಥೆಯಾಗಿದೆ. ವ್ಯಕ್ತಿಗಳು ಮತ್ತು ಬಿಸಿನೆಸ್‌ಗಳಿಗೆ ಕ್ರೆಡಿಟ್ ಸ್ಕೋರ್ ರಚಿಸಲು ಕ್ರೆಡಿಟ್ ಬ್ಯೂರೋಗಳು ಈ ಡೇಟಾವನ್ನು ಬಳಸುತ್ತವೆ. 

ಸಾಲದಾತರಿಗೆ, ಕ್ರೆಡಿಟ್ ಬ್ಯೂರೋಗಳು ಗ್ರಾಹಕರ ಕ್ರೆಡಿಟ್ ಇತಿಹಾಸ ಮತ್ತು ಮರುಪಾವತಿ ಸಾಮರ್ಥ್ಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಇರುವ ವಿಶ್ವಾಸಾರ್ಹ ಮೂಲವಾಗಿ ಕಾರ್ಯನಿರ್ವಹಿಸುತ್ತವೆ. 

ಭಾರತದ ಅತ್ಯಂತ ಪ್ರಮುಖ ಕ್ರೆಡಿಟ್ ಬ್ಯೂರೋಗಳು: ಸಿಬಿಲ್ (ಕ್ರೆಡಿಟ್ ಇನ್ಫರ್ಮೇಶನ್ ಬ್ಯೂರೋ ಇಂಡಿಯಾ ಲಿಮಿಟೆಡ್), ಇಕ್ವಿಫ್ಯಾಕ್ಸ್, ಹೈಮಾರ್ಕ್ ಮತ್ತು ಎಕ್ಸ್‌ಪೀರಿಯನ್. 

ನೀವು ಏಕೆ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು?

ನೀವು ಹೋಮ್ ಲೋನ್‌ಗೆ ಅಪ್ಲೈ ಮಾಡಿದಾಗ ಮತ್ತು ಹೆಚ್ಚಿನ, ಅಂದರೆ 750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವಾಗ, ನೀವು ಸಾಲದಾತರಿಂದ ಈ ರೀತಿಯ ವಿಶೇಷ ಪ್ರಯೋಜನಗಳನ್ನು ನಿರೀಕ್ಷಿಸಬಹುದು:

  • ವರ್ಧಿತ ಹೋಮ್ ಲೋನ್ ಅರ್ಹತೆ: ನೀವು ಹೆಚ್ಚಿನ ಮೊತ್ತದ ಲೋನ್ ಪಡೆಯಬಹುದು (ಅಗತ್ಯವಿದ್ದರೆ).
  • ವೇಗವಾದ ಲೋನ್ ಪ್ರಕ್ರಿಯೆ: ಸಾಲದಾತರು ನಿಮ್ಮ ಲೋನ್ ಅಪ್ಲಿಕೇಶನ್ ಅನ್ನು ವೇಗವಾಗಿ ಪ್ರಕ್ರಿಯೆಗೊಳಿಸಬಹುದು ಮತ್ತು ಮೊತ್ತವನ್ನು ತ್ವರಿತವಾಗಿ ವಿತರಿಸಬಹುದು.

ಇತರೆ ಪ್ರಯೋಜನಗಳು: ನಿಮ್ಮ ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಉತ್ತಮ ಮರುಪಾವತಿ ಹಿಸ್ಟರಿಯಿಂದಾಗಿ, ಸಾಲದಾತರು ಕಡಿಮೆ ಬಡ್ಡಿ ದರ ಮತ್ತು ರಿಯಾಯಿತಿ ಪ್ರಕ್ರಿಯಾ ಶುಲ್ಕಗಳು ಮತ್ತು ಇತರ ಶುಲ್ಕಗಳಲ್ಲಿ ಹೋಮ್ ಲೋನ್ ಅನ್ನು ಒದಗಿಸಬಹುದು.

ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುವುದು ಹೇಗೆ?

  • ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳು ಅಥವಾ ಲೋನ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ. 
  • ನೀವು ನಿಮ್ಮ ಬಿಲ್‌ಗಳನ್ನು ಪೂರ್ಣವಾಗಿ ಸೆಟಲ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. 
  • ಸುರಕ್ಷಿತ ಮತ್ತು ಭದ್ರತೆ ರಹಿತ ಲೋನ್‌ಗಳ ನಡುವೆ ಉತ್ತಮ ಬ್ಯಾಲೆನ್ಸ್ ಅನ್ನು ನಿರ್ವಹಿಸಿ.
  • ಯಾವಾಗಲೂ ನಿಮ್ಮ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸಿ ಮತ್ತು ತಪ್ಪುಗಳನ್ನು ಹುಡುಕಿ. ನೀವು ಮಾಡಿರದ ಯಾವುದೇ ಟ್ರಾನ್ಸಾಕ್ಷನ್‌ಗಳು ಕಂಡರೆ, ಅದನ್ನು ತಕ್ಷಣವೇ ಕ್ರೆಡಿಟ್ ಬ್ಯೂರೋಗೆ ರಿಪೋರ್ಟ್ ಮಾಡಿ ಮತ್ತು ಅವುಗಳನ್ನು ಸರಿಪಡಿಸಿಕೊಳ್ಳಿ. 
  • ನಿಮ್ಮ ಕ್ರೆಡಿಟ್ ಕಾರ್ಡನ್ನು ಎಚ್ಚರಿಕೆಯಿಂದ ಬಳಸಿ ಮತ್ತು ಕ್ರೆಡಿಟ್ ಮಿತಿಯ 50% ಕ್ಕಿಂತ ಹೆಚ್ಚು ಬಳಸದಿರಲು ಪ್ರಯತ್ನಿಸಿ.
  • ಒಂದೇ ಸಮಯದಲ್ಲಿ ಅನೇಕ ಲೋನ್‌ಗಳಿಗೆ ಅಪ್ಲೈ ಮಾಡುವುದನ್ನು ತಪ್ಪಿಸಿ. ಇದು ನೀವು ಕ್ರೆಡಿಟ್ ಹಂಗ್ರಿ ಎಂದು ಪ್ರತಿಫಲಿಸುತ್ತದೆ.